ಗಡಾದ ಮರಡಿಯ ಮೇಲೆ ಧ್ವಜಾರೋಹಣ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರು,ಜ 27: ಕಿತ್ತೂರು ರಾಣಿ ಚನ್ನಮ್ಮನವರ ಪಾದಸ್ಪರ್ಶದಿಂದ ಪಾವನವಾದ ಐತಿಹಾಸಿಕ ಗಡಾದ ಮರಡಿಯ ಮೇಲೆ ಧ್ವಜಾರೋಹಣ ಮಾಡುತ್ತಿರುವುದು ನನ್ನ ಹಿಂದಿನ ಜನ್ಮದ ಪುಣ್ಯ ಎಂದು ಪೆÇ್ರೀಭೇಷನರಿ ಐಎಎಸ್ ಅಧಿಕಾರಿ ಶುಭಂ ಶುಕ್ಲಾ ಹೇಳಿದರು.
75 ನೇ ಗಣರಾಜ್ಯೋತ್ಸವದ ನಿಮಿತ್ತ ಐತಿಹಾಸಿಕ ಗಡಾದ ಮರಡಿ ಹಾಗೂ ಕಿತ್ತೂರು ರಾಣಿ ಚನ್ನಮ್ಮನ ಸರ್ಕಲ್ ನಲ್ಲಿ ಸುಮಾರು 80 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.
ಪ್ರಸ್ತುತ ಸಾಲಿನಲ್ಲಿ ಮಳೆಯ ಕೊರತೆಯಿಂದ ಬರಗಾಲ ಆವರಿಸಿದ್ದು ಸರ್ಕಾರ ಚನ್ನಮ್ಮನ ಕಿತ್ತೂರು ತಾಲೂಕನ್ನು ಬರ ಪಿಡಿತ ತಾಲೂಕು ಎಂದು ಘೋಷಣೆ ಮಾಡಿದ್ದು ತಾಲೂಕಾ ಆಡಳಿತ ಸದಾ ನಿಮ್ಮ ಬೆನ್ನಿಗೆ ಇರುತ್ತದೆ ಎಂದರು.

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ದೇಶದ ಸ್ವಾತಂತ್ರ್ಯ ಕ್ಕಾಗಿ ಹಲವಾರು ಮಹನೀಯರು, ಸೈನಿಕರು ಪ್ರಾಣತ್ಯಾಗ ಮಾಡಿ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿದ್ದಾರೆ ಅವರ ಸ್ಮರಣೆಗಾಗಿ ನಾವು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ. ನಮ್ಮ ದೇಶ ಸಾಕಷ್ಟು ವ್ಯವಿಧ್ಯತೆಗಳಲ್ಲಿ ಏಕತೆಯನ್ನು ಹೊಂದಿರುವ ಏಕಮಾತ್ರ ರಾಷ್ಟ್ರವಾಗಿದ್ದುನಾವು ದೇಶಕ್ಕೆ ನಮ್ಮದೆಯಾದ ಕೊಡುಗೆಗಳನ್ನು ನೀಡಬೇಕು ಎಂದರು.

ತಹಶೀಲ್ದಾರ ರವೀಂದ್ರ ಹಾದಿಮನಿ, ಪಿಎಸ್‍ಐ ಪ್ರವೀಣ ಗಂಗೋಳ, ಬಿಇಒ ಆರ್.ಪಿ. ಜುಟ್ಟನವರ, ಕ್ಯೂರೇಟರ್ ರಾಘವೇಂದ್ರ, ಮಹೇಶ ಹೆಗಡೆ, ಅಶ್ಫಾಕ ಹವಾಲ್ದಾರ, ಮಹೇಶ ಚನ್ನಂಗಿ, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಮಾಜಿ ಸೈನಿಕರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಟ್ಟಣದ ನಾಗರಿಕರು ಸೇರಿದಂತೆ ಇತರರಿದ್ದರು.