ಗಠಾರಕ್ಕೆ ಮುಗುಚಿ ಬಿದ್ದ ಔಷಧಿ ವಾಹನ ಚಾಲಕ ಪ್ರಾಣಯಾಪದಿಂದ ಪಾರು

ಹರಿಹರ.ಜ.20 ; ಔಷಧಿ ತೆಗೆದುಕೊಂಡು ಹೋಗುವ ವಾಹನ ದೊಡ್ಡ ಗಾತ್ರದ ಚರಂಡಿಗೆ ಬಿದ್ದು ಚಾಲಕ ಪ್ರಾಣಾಯಾಪದಿಂದ ಪಾರಾಗಿರುವ ಘಟನೆ ಹಳೆಯ ಪಿಬಿ ರಸ್ತೆ ಗೋಪಾಲಕೃಷ್ಣ ಲಾಡ್ಜ್  ಬಿಲ್ಡಿಂಗ್ ಮುಂಭಾಗದಲ್ಲಿ ನಡೆದಿದೆಮುಂಜಾನೆ ಔಷಧಿ ಗುಳಿಗೆ  ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕೆಎಸ್ ಆರ್ ಟಿ ಸಿ  ಬಸ್ಸು ಮುಂದೆ ಸಾಗಿದ ಹಿಂದೆ ಇದ್ದ ಔಷಧಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಗಠಾರಕ್ಕೆ  ಬಿದ್ದ ಪರಿಣಾಮ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ವಾಹನವು ಮುಂಭಾಗವು ಜಕ್ಕಂಗೊಂಡಿದೆ. ಹಳೆ ಪಿ ಬಿ  ರಸ್ತೆ ಆಗಲೇ ಕಾರಣವಾಗಿ ಸುಮಾರು ವರ್ಷ ಕಳೆದರೂ  ಅಲ್ಲಿನ ರಸ್ತೆ ಚರಂಡಿಗಳು ಪೂರ್ಣವಾಗದೆ ಅಪೂರ್ಣವಾಗಿರುವುದಕ್ಕೆ ಪದೇ ಪದೇ ಅಪಘಾತಗಳು ಆಗುತ್ತಿದ್ದರು ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಗಮನ ವಹಿಸದೆ ನಿರ್ಲಕ್ಷವೇ ಕಾರಣ ಎಂದು ವಾಹನ ಸವಾರರು ಸ್ಥಳೀಯ ಸಾರ್ವಜನಿಕರು ಆರೋಪಿಸಿದರು.ಸಾರ್ವಜನಿಕರ ಪ್ರಾಣ ಜೊತೆಗೆ ಆಟವಾಡದನ್ನು ಬಿಟ್ಟು  ಹಳೇ ಪಿಬಿ  ರಸ್ತೆಯಲ್ಲಿ ಅಪಘಾತಕ್ಕೆ ಆಹ್ವಾನವನ್ನು ನೀಡುತ್ತಿರುವ ರಸ್ತೆ  ಚರಂಡಿಗಳ ಕಾಮಗಾರಿ ಮಾಡುವುದಕ್ಕೆ ಮುಂದಾಗದಿದ್ದರೆ ರೊಚ್ಚಿಗೆದ್ದ ಜನರಿಂದ  ಅವಘಡ ಆಗುವ  ಮುನ್ನವೇ ಶಾಸಕರು ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸಿ ಅಪೂರ್ಣಗೊಂಡ   ಕಾಮಗಾರಿಯನ್ನು ಪೂರ್ಣಗೊಳಿಸಿ  ಸಾರ್ವಜನಿಕರಿಗೆ ವಾಹನ ಸವಾರರಿಗೂ ಸುಗಮ ಸಂಚಾರ ಅಪಘಾತಗಳನ್ನು ತಡೆಯಬೇಕೆಂದು  ಸಂಘ ಸಂಸ್ಥೆಯವರು ವಾಹನ ಸವಾರರು ಸಾರ್ವಜನಿಕರು  ಒತ್ತಾಯಿಸಿದರು.