ಕೋಲಾರ,ಜು,೧೦-ತಾಲೂಕಿನ ಗಟ್ಟಹಳ್ಳಿಯ ಶ್ರೀ ಆಂಜನಪ್ಪ ಸ್ವಾಮಿ ಆಶ್ರಮದಲ್ಲಿ ಜು.೧೦ರ ಸೋಮವಾರ ಶ್ರೀ ಚಾಮುಂಡೇಶ್ವರಿ ಜನ್ಮದಿನೋತ್ಸವದ ಅಂಗವಾಗಿ ಬೆಳಗ್ಗೆ ೭ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಚಂಡೀಹೋಮ ಹಾಗೂ ಅಭಿಷೇಕ ಪಂಚಮುಖಿ ದೇವಸ್ಥಾನದ ಸಂಸ್ಥಾಪಕ ಬೆಂಗಳೂರಿನ ಶ್ರೀ ಗಣಪತಿ ದೀಕ್ಷಿತ್ ಮತ್ತು ಶಿಷ್ಯ ವೃಂದದವರಿಂದ ನಡೆಯಿತು.
ಗಟ್ಟಹಳ್ಳಿ ವೆಂಕಟೇಶ್ ಮತ್ತು ತಂಡದಿಂದ ನಾದಸ್ವರ, ಗಟ್ಟಹಳ್ಳಿ, ಅಣ್ಣೇನಹಳ್ಳಿ, ಜಡೇರಿ, ಮಾರೇನಹಳ್ಳಿ, ಹೋಳೂರು, ಜನಪನಹಳ್ಳಿ, ರಾಮಾಪುರ ಸೇರಿದಂತೆ ಇತರೆ ಗ್ರಾಮಸ್ಥರಿಂದ ದೀಪಗಳ ಜಾತ್ರೋತ್ಸವ, ಮಹಾಮಂಗಳಾರತಿ ನಡೆಯಿತು ಎಂದು ಶ್ರೀ ಆಂಜನಪ್ಪ ಸ್ವಾಮಿ ಆಶ್ರಮದ ಧರ್ಮಾಧಿಕಾರಿ ಬಿ.ಸಿ.ಸೋಮಶೇಖರ ಸ್ವಾಮೀಜಿ ಹಾಗೂ ಡಾ.ಜಯಮ್ಮ ತಿಳಿಸಿದ್ದಾರೆ.