ಗಜೇಂದ್ರಗಡ : ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ

ಗದಗ, ಮಾ17: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅರ್ಹ ಪ್ರತಿ ಮತದಾರನು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು.ಹಾಗೂ ಮತದಾನ ಮಾಡುವುದು ತಮ್ಮ ಕರ್ತವ್ಯವೆಂದು ಅರಿತು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಸ್ವೀಪ್ ಸಮಿತ ಅಧ್ಯಕ್ಷರೂ ಆದ ಡಾ. ಸುಶೀಲಾ ಬಿ ಹೇಳಿದರು.
ಅವರು ಗಜೇಂದ್ರಗಡ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಹಾಗೂ ಪಕ್ಕದ ವಾರ್ಡನಲ್ಲಿ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾದ ಮತದಾರರ ಮನೆ ಮನೆ ಭೇಟಿ ನೀಡಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಿದರು.
ಮನೆ ಮನೆ ಭೇಟಿ ವೇಳೆ ಚುನಾವಣಾ ಆಯೋಗ ನೀಡಿರುವ ಮತದಾನದ ಗುರುತಿನ ಚೀಟಿ ಇದೆಯೋ ಇಲ್ಲವೋ ಎಂದು ಪರಿಶೀಲಿಸಿದರು ಹಾಗೂ ಮತದಾರರ ಚೀಟಿಯಂತೆ ತಮ್ಮ ಮತದಾನ ಕೇಂದ್ರ ಯಾವುದೂ ಎಂಬುದನ್ನು ಮತದಾರರಿಂದಲೇ ಕೇಳಿ ಖಚಿತಪಡಿಸುವುದು. ಮತದಾನದಿಂದಾಗುವ ಪ್ರಯೊಜನಗಳ ಕುರಿತು ಅರಿವು ಮೂಡಿಸಿದರು.
ಕಡಿಮೆ ಮತದಾನವಾಗಿರುವ ಕೇಂದ್ರಗಳಲ್ಲಿ ಪರಿಣಾಮಕಾರಿ ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಮತದಾರರನ್ನು ಮತದಾನ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ ಎಂದರು. ಮತದಾನ ನಮ್ಮ ಹಕ್ಕು ಅದನ್ನು ನನ್ನ ಕರ್ತವ್ಯ ವೆಂದು ಅರಿತು ಮತದಾನ ಮಾಡುತ್ತೇನೆ. ನಾನು ಮತ ಚಲಾಯಿಸುವ ಮೂಲಕ ನನ್ನ ಮನೆಯ ಸದಸ್ಯರೆಲ್ಲರನ್ನೂ ಹಾಗೂ ನೆರೆಹೊರೆಯವರನ್ನು ಮತದಾನಕ್ಕೆ ಮತದಾನ ಮಾಡಲು ಪ್ರೇರೇಪಿಸುತ್ತೇನೆ ಎಂದು ಅರಿವು ಮೂಡಿಸಲಾಯಿತು.
ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರನ್ನು ಜಾಗೃತಗೊಳಿಸಿ ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗುವಂತೆ ಕ್ರಮ ವಹಿಸಲು ಎಲ್ಲ ಹಂತದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿ ಅರ್ಹ ಮತದಾರರು ಪಾಲ್ಗೊಳ್ಳಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಾಗೀಶ ಶಿವಾಚಾರ್ಯ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕಿಶನ್ ಕಲಾಲ್, ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ , ಲೆಕ್ಕ ಸಹಾಯಕ ದೇವರಾಜ, ತಹಶೀಲ್ದಾರ ರಜನೀಕಾಂತ, ಪುರಸಭೆಯ ಮುಖ್ಯಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಬಿ.ಎಲ್.ಓಗಳು ಹಾಜರಿದ್ದರು.