ಗಜಲ್ ಗಾರುಡಿಗ ಹಂದಿಗನೂರ ಸಿದ್ರಾಮಪ್ಪ ಹೆಸರಲ್ಲಿ ಪ್ರಶಸ್ತಿ ನೀಡಲು ಒತ್ತಾಯ

ಸಿಂದಗಿ :ಜ.10: ಗಜಲ್ ಗಾರುಡಿಗ ಹಂದಿಗನೂರ ಸಿದ್ರಾಮಪ್ಪನವರು ಉತ್ತರ ಕರ್ನಾಟಕದಲ್ಲಿ ಹುಟ್ಟು ಇಡೀ ಜಗತ್ತನ್ನೆ ಗೆದ್ದು ಜನಮನ ಸೂರುಗೊಂಡಿದ್ದರು ಅಂತವರನ್ನು ಸರಕಾರ ಮಟ್ಟದಲ್ಲಿ ಗುರುತಿಸದೇ ಇರುವುದು ವಿಷಾದಕರ ಸಂಗತಿಯಾಗಿದ್ದು ಕಾರಣ ಅವರ ಹೆಸರಿನಿಂದ ಪ್ರತಿವರ್ಷ ಪ್ರಶಸ್ತಿ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಅಸಂಘಟಿತ ಕಾರ್ಮಿಕರ ಜಿಲ್ಲಾ ಸಂಚಾಲಕ ಮುತ್ತು ಶಾಬಾದಿ ಹೇಳಿದರು.
ಪಟ್ಟಣದ ಸ್ವರ ತರಂಗ ಸಂಗೀತ ಪಾಠ ಶಾಲೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಶುಕ್ರವಾರರಂದು ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ಅವರ ಕಲೆಯಿಂದ ಪರಿಚಿತರಾಗಿ ಜನಮನ ಗಳಿಸಿದ್ದರು. ಇಂದಿನ ಯುವ ಜನಾಂಗಕ್ಕೆ ನಿರಂತರವಾಗಿ ಸಿದ್ರಾಮಪ್ಪನವರ ಪರಿಚಯ ಸಿಗುವಂತೆ ಮಾಡಬೇಕು. ಬೆಂಗಳೂರ ಭಾಗದಲ್ಲಿ ಉತ್ತರ ಕರ್ನಾಟಕದ ಕಲಾವಿದರನ್ನು ತಾರತಮ್ಮೆ ಭಾವನೆಯಿಂದ ಕಾಣುತ್ತಾರೆ ಆದ್ದರಿಂದ ಉತ್ತರ ಕರ್ನಾಟಕದ ಭಾಗದ ಕಲಾವಿದರನ್ನು ಸದಾ ಅವರನ್ನು ಪ್ರೇರಣೆ ನೀಡಬೇಕು ಎಂದರು.
ಖ್ಯಾತ ವೈದ್ಯ ಡಾ , ಗಿರೀಶ ಕುಲಕರ್ಣಿ ಅವರು ಮಾತನಾಡಿ ನಮ್ಮ ನಾಡಿನಲ್ಲಿ ಹಲವಾರು ಕಲಾವಿದರು ಆರ್ಥಿಕವಾಗಿ ನೊಂದು ಕೊಂಡಿದ್ದು ಅವರನ್ನು ಸರಕಾರ ಆರ್ಥಿಕವಾಗಿ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಸಭೆ ಅಧ್ಯಕ್ಷ ವಹಿಸಿದ ನಿವೃತ್ತ ಪ್ರಾಧ್ಯಾಪಕ ಶಾಂತೂ ಹಿರೇಮಠ ಮಾತನಾಡಿ, ಮಕ್ಕಳಿಗೆ ಉತ್ತಮ ಸನ್ಮಾರ್ಗ ಬೆಳೆಸಲು ಸಂಗೀತ ಪ್ರೇರಣೆ ನೀಡುತ್ತದೆ. ಭಾರತೀಯ ಸಂಸ್ಕøತಿಯ ಪದ್ದತಿಯಲ್ಲಿ ಸಂಗೀತ ಹಾಡಿಗೆ ಬಹಳ ಬೆಲೆ ಇದೆ ಎಂದರು.
ಚಲನ ಚಿತ್ರ ಹಿನ್ನಲೆ ಗಾಯಕ ಪಂ ರವೀಂದ್ರ ಸೊರಗಾಂವಿ, ಹಾಗೂ ಖ್ಯಾತ ತಬಲಾ ಹನುಮಂತ್ರಾಯ ಚಿಕ್ಕಕೋಟ್ನೆಕಲ್ , ಹಣಮೇಶ ಹೂಗಾರ ಭಾಗವಹಿಸಿ ಸಂಗೀತ ಸಂಜೆ ಅದ್ದುರಿಯಾಗಿ ಕಾರ್ಯಕ್ರಮ ನೆರವೇರಿಸಿದರು , ಸ್ವರ ತರಂಗ ಪಾಠ ಶಾಲೆ ಸಂಗೀತ ಶಿಕ್ಷಕ ಮುದ್ದುರಾಜ ಅಲ್ದಿ, ತಾಲೂಕಾ ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಎ ಬಿ ಸಿ ಡಿ ಡ್ಯಾನ್ಸ ಕ್ಲಾಸಿನ ಸಂಚಾಲಕ ಜ್ಞಾನೇಶ ಗೊರವ, ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಅಗಸರ, ರಾಗ ರಂಜನಿ ಮೆಲೋಡಿಸ್ ಸಂಚಾಲಕ ಪ್ರಕಾಶ, ಶಿಕ್ಷಕ ಶಿವಾನಂದ ಶಾಹಾಪೂರ, ಭಾಗೇಶ ಗೋಲಗೇರಿ, ಮಾಹಾಂತೇಶ ನಾಗೂಜಿ, ಮಾಹಾಂತೇಶ ನೂಲನವರ, ಶಿಕ್ಷಕಿ ಸಾಹಿತಿ ಜ್ಯೋತಿ ನಂದಿಮಠ, ಪ್ರೇಮಾ ನಾಯಕ, ಕವಿಯತ್ರಿ
ಪದ್ಮಾ ರವಿ, ಪ್ರಶಾಂತ ಕೆಂಭಾವಿ , ಸಿದ್ದರಾಮ ಉಪ್ಪಿನ , ಪ್ರಲ್ಹಾದ ಜಿ ಕೆ, ಭೀಮಾಶಂಕರ ಮಾಡಬಾಳ, ವೀಣಾ ನಾಯಕ, ಸಂತೋಷ ಬಗಲಿ, ಸಿದ್ದನಗೌಡ, ವಿಶ್ವ ಶಾಬಾದಿ, ವಿಶಾಲ ನಾಯ್ಕೋಡಿ, ಶ್ರೀ ಶೈಲ ಹೂಗಾರ, ಬಾಪುಗೌಡ, ಸ್ವರ ತರಂಗ ಸಂಗೀತಾ ಪಾಠ ಶಾಲೆಯ ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದರು.
ಶಿಕ್ಷಕ ಪವನ ಕುಲಕರ್ಣಿ ನಿರೂಪಿಸಿದರು, ಕವಿ ಕಲಾವಿದ ಸಿದ್ದರಾಮ ಬ್ಯಾಕೋಡ ಸ್ವಾಗತಿಸಿದರು. ಶಿಕ್ಷಕ ಗುರುನಾಥ ಅರಳಗುಂಡಗಿ ವಂದಿಸಿದರು,