ಗಗನಕ್ಕೇರಿದ ಹೂ,ಹಣ್ಣು, ತರಕಾರಿ ಬೆಲೆ

ಚಿಕ್ಕಬಳ್ಳಾಪುರ,ಆ.೨೪-ನಾಳೆ ಶುಭ ಶ್ರಾವಣ ಮಾಸದ ಎರಡನೇ ಶುಕ್ರವಾರವಾಗಿದ್ದು ಈ ದಿನವನ್ನು ಸನಾತನ ಭಾರತೀಯ ಸಂಸ್ಕೃತಿಯ ಮಹಿಳೆಯರು ಶ್ರೀ ವರಮಹಾಲಕ್ಷ್ಮಿ ಹಬ್ಬ ಎಂದು ಸಂಭ್ರಮದಿಂದ ಆಚರಿಸುವರು ಈ ಕಾರಣದಿಂದ ಹಬ್ಬದ ಆಚರಣೆಗೆ ಮಾಡಿಕೊಳ್ಳಬೇಕಾದ ಪೂರ್ವ ಸಿದ್ಧತೆಗಳು ಭರದಿಂದ ನಡೆಯುತ್ತಿದೆ.
ವರಮಹಾಲಕ್ಷ್ಮಿ ಹಬ್ಬದ ಕಾರಣ ಹಣ್ಣು ಮತ್ತು ಹೂವಿನ ಬೆಲೆ ಅತ್ಯಂತ ಹೆಚ್ಚಾಗಿದೆ ಒಂದು ಕೆಜಿ ಒಂದು ಕೆಜಿ ಬಾಳೆಹಣ್ಣಿಗೆ ೮೦ ರಿಂದ ೧೦೦ ಒಂದು ಕೆಜಿ ಸೇಫ್ ಗೆ ೧೫೦ ರಿಂದ ೨೦೦ ರೂ ಒಂದು ಕೆಜಿ ದಾಳಿಂಬೆಗೆ ೧೫೦ ರಿಂದ ೧೮೦ ಒಂದು ಕೆಜಿ ಮೋಸಂಬಿಗೆ ೮೦ ರಿಂದ ೧೦೦ ರೂಗಳಾಗಿದೆ
ಇನ್ನು ಹೂವಿನ ದರವನ್ನು ಕೇಳುವುದೆಂದರೆ ಎದೆ ನಿಂತಂತಾಗುತ್ತದೆ ಕಾರಣ ಒಂದು ಕೆಜಿ ೧,೫೦೦ ಒಂದು ಕೆಜಿ ಮಲ್ಲಿಗೆ ೮೦೦ ರಿಂದ ಸಾವಿರ ಒಂದು ಕೆಜಿ ಸೇವಂತಿಗೆ ನನ್ನೂರು ಕೆಜಿ ಬಟನ್ ನನ್ನೂರು ಒಂದು ಮೊಳ ತುಳಸಿ ೩೦ ರೂಪಾಯಿ ಒಂದು ಮೊಳ ಮಲ್ಲಿಗೆ ಹೂವು ೮೦ ಹೀಗೆ ಹೂವಿನ ಬೆಲೆ ಯದ್ವಾತದ್ವ ಏರಿದೆ.
ನಮ್ಮ ದೇಶದಲ್ಲಿ ಜಾತಿ ಮತ ಬಡವ ಬಲ್ಲಿದ ಎಂಬ ಭೇದ ಭಾವ ಇಲ್ಲದೆ ಎಲ್ಲರೂ ಅವರವರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಶ್ರೀ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುವರು.
ಧನ ಧಾನ್ಯವನ್ನು ಸಿರಿ ಸಂಪತ್ತನ್ನು ಆರೋಗ್ಯ ಆಯುಷ್ಯವನ್ನು ಕರುಣಿಸುವ ದೇವತೆ ಶ್ರೀ ವರಮಹಾಲಕ್ಷ್ಮಿ ತಮ್ಮ ತಮ್ಮ ಮನೆಗಳಲ್ಲಿ ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಮಹಿಳೆಯರು ಅತ್ಯಂತ ಸಂಭ್ರಮದಿಂದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಸಂಪತ್ತಿನ ಅತಿ ದೇವತೆ ಶ್ರೀ ಮಹಾಲಕ್ಷ್ಮಿ ದೇವಿಯನ್ನು ವಿಜಯಲಕ್ಷ್ಮಿ, ವೀರಲಕ್ಷ್ಮಿ ಧನಲಕ್ಷ್ಮಿ ಧಾನ್ಯಲಕ್ಷ್ಮಿ ಸೌಭಾಗ್ಯ ಲಕ್ಷ್ಮಿ ಸಂತಾನ ಲಕ್ಷ್ಮಿ ಹೀಗೆ ನಾನಾ ವಿಧವಾದ ಹೆಸರುಗಳಿಂದ ರೂಪಗಳಿಂದ ಕೆಲವರು ಅರಿಶಿಣ ದಿಂದ ತಯಾರಿಸುವ ಮಹಾಲಕ್ಷ್ಮಿ ಮತ್ತೆ ಕೆಲವರು ಮತ್ತೆ ಲಕ್ಷ್ಮಿ ದೇವಿಯ ವಿಗ್ರಹ ಕಳಶ ಚಿತ್ರಪಟ ಹೀಗೆ ಅವರವರ ಸಂಪ್ರದಾಯಗಳಿಗೆ ಅನುಗುಣವಾಗಿ ಲಕ್ಷ್ಮಿ ಪೂಜೆಯನ್ನು ಮಾಡಿ ಪ್ರಾರ್ಥಿಸುವರು.