ಗಗನಕ್ಕೇರಿದ ಕೆಎಂಎಫ್ ಉತ್ಪನ್ನಗಳ ದರ

ಬೆಂಗಳೂರು, ನ.೨೫: ಹಾಲು ಮೊಸರಿನ ಬೆಲೆ ಏರಿಕೆ ಬೆನ್ನಲ್ಲೇ ಕೆಎಂಎಫ್ ಇತರ ಉತ್ಪನ್ನಗಳ ದರವನ್ನೂ ಗಗನಕ್ಕೇರಿಸಿದ್ದು, ಗ್ರಾಹಕರಿಗೆ ಬಿಸಿ ತಟ್ಟಲಿದೆ. ಕೇವಲ ತುಪ್ಪ ಮಾತ್ರವಲ್ಲ ಇದೀಗ ಕೆಎಂಎಫ್ ನ ಎಲ್ಲ ಉತ್ಪನ್ನಗಳ ದರವೂ ಶೇ.೫-೧೫ರಷ್ಟು ಹೆಚ್ಚು ಮಾಡಿದೆ. ಇನ್ನು ಒಂದು ಕೆಜಿಗೆ ೫೦ ರೂ. ತುಪ್ಪದ ದರ ಹೆಚ್ಚಳ ಆಗುವ ಸಾಧ್ಯತೆಯಿದೆ. ಅದು ಅಲ್ಲದೆ ದಸರಾ ಹಬ್ಬದಿಂದಲೇ ತುಪ್ಪದ ದರ ಹೆಚ್ಚುತ್ತಲೇ ಇದೆ. ಒಂದೇ ಬಾರಿ ದರ ಏರಿಸದೇ ಕಳೆದ ಎರಡು ತಿಂಗಳಿನಲ್ಲಿ ನಾಲ್ಕು ಬಾರಿ ಹಂತ ಹಂತವಾಗಿ ಒಟ್ಟು ೧೭೦ ರೂಪಾಯಿವರೆಗೆ ಹೆಚ್ಚಳ ಮಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ತುಪ್ಪದ ದರ ಹೆಚ್ಚಳ ಮಾಡಿದ್ದು ನಿಜ. ಇತರೆ ಉತ್ಪನ್ನಗಳ ದರವೂ ಜಾಸ್ತಿ ಮಾಡಿದ್ದೇವೆ ಎಂದರು.
ಮತ್ತೊಂದೆಡೆ, ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, ಹಾಲು, ಮೊಸರಿನ ದರ ಎರಡು ರೂಪಾಯಿ ಹೆಚ್ಚಳ ಮಾಡಿದರೂ ಹೊಟೇಲ್ ಅಲ್ಲಿ ದರ ಏರಿಕೆ ಮಾಡಲ್ಲ. ಈ ಕೂಡಲೇ ನಾವು ಹೋಟೆಲ್ ಅಲ್ಲಿ ತಿಂಡಿ, ಆಹಾರದ ಬೆಲೆ ಏರಿಕೆ ಮಾಡಲ್ಲ. ಈ ವಿಚಾರದ ಬಗ್ಗೆ ಸ್ವಲ್ಪ ದಿನ ಕಾದು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಯಾವ ಉತ್ಪನ್ನ – ಎಷ್ಟು ಏರಿಕೆ?

ಜಾಮೂನು – ಹಿಂದಿನ ದರ ೧೩೦ ರೂ.- ಈಗಿನ ದರ ೧೫೦ ರೂ. (೧/೨ ಕೆ.ಜಿ) * ಪ್ಲೇವರ್ಡ್ ಮಿಲ್ಕ್ – ಹಿಂದಿನ ದರ ೨೦ ರೂ. – ಈಗಿನ ದರ ೨೫ ರೂ. (೨೦೦ ಎಂಎಲ್‌ಗೆ ೫ ರೂ. ಹೆಚ್ಚಳ) * ರಸಗುಲ್ಲ – ಹಿಂದಿನ ದರ ೧೩೦ ರೂ. – ಈಗಿನ ದರ ೧೫೦ ರೂ. (೧/೪ ಕೆ.ಜಿ) * ಬರ್ಫಿ – ಹಿಂದಿನ ದರ ೧೯೫ ರೂ. – ಈಗಿನ ದರ ೨೧೦ ರೂ. (೧/೪ ಕೆ.ಜಿ) * ಗುಡ್‌ಲೈಫ್ – ಹಿಂದಿನ ದರ ೨೬ ರೂ.- ಈಗಿನ ದರ ೨೮ ರೂ. ಪ್ರತಿ ಲೀಟರ್‌ಗೆ * ಮೈಸೂರು ಪಾಕ್ – ಹಿಂದಿನ ದರ ೧೩೫ ರೂ. – ಈಗಿನ ದರ ೧೬೦ ರೂ. (೧/೪ ಕೆ.ಜಿ) * ಕೋವಾ – ಹಿಂದಿನ ದರ ೬೦ ರೂ. – ಈಗಿನ ದರ ೯೦ರೂ. (೨೦೦ ಗ್ರಾಂ) * ಪೇಡ – ಹಿಂದಿನ ದರ ೨೨೦ರೂ.- ಈಗಿನ ದರ ೨೪೦ ರೂ. (೧/೪ ಕೆ.ಜಿ) * ಬಾದಾಮ್ ಪೌಡರ್ – ಹಿಂದಿನ ದರ ೪೦೦ ರೂ. – ಈಗಿನ ದರ ೪೪೦ ರೂ. (೧ ಕೆ.ಜಿಗೆ ೪೦ ರೂ. ಹೆಚ್ಚಳ) * ಕೋಡ್ಬಳೆ – ಹಿಂದಿನ ದರ ೫೦೦ ರೂ. – ಈಗಿನ ದರ ೬೦೦ ರೂ. (೨೦೦ ಗ್ರಾಂ.) * ರಸ್ಕ್ – ಹಿಂದಿನ ದರ ೧೫ ರೂ. – ಈಗಿನ ದರ ೨೯ ರೂ. (೧೦೦ ಗ್ರಾಂ.)