ಗಂವ್ಹಾರದಿಂದ ಅಬ್ಬೆತುಮಕೂರ ಶ್ರೀಗಳ ಪರಂಪರಾ ಪಾದಯಾತ್ರೆ

ಜೇವರ್ಗಿ : ಜು.27:ಸಿದ್ಧಿಪುರುಷ ಶ್ರೀವಿಶ್ವಾರಾದ್ಯರ ಜನ್ಮಕ್ಷೇತ್ರ ತಾಲೂಕಿನ ಸುಕ್ಷೇತ್ರ ಗಂವ್ಹಾರ ಗ್ರಾಮದಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಸಿದ್ದಿ ಪಡೆದ ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರ ವರೆಗೆ ಡಾ.ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ಸಹಸ್ರಾರು ಭಕ್ತರು ಪರಂಪರಾ ಪಾದಯಾತ್ರೆ ಆರಂಭಿಸಿದರು.

ಡಾ.ಗಂಗಾಧರ ಶ್ರೀಗಳ ಸಂಕಲ್ಪದಂತೆ ಪ್ರತಿ ವರ್ಷ ನಡೆಯುವ ಈ ಭಕ್ತಿಯ ಪಾದಯಾತ್ರೆಯಲ್ಲಿ ಕಲಬುರಗಿ, ಯಾದಗಿರಿ, ರಾಯಚೂರ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಜನ ಭಕ್ತರು ಸಾಕ್ಷಿಯಾದರು. ಮಂಗಳವಾರ ಬೆಳಿಗ್ಗೆ ಗಂವ್ಹಾರ ಗ್ರಾಮದ ಬನ್ನಿಬಸವೇಶ್ವರ ಗುರುಗಳ ಕರ್ತೃ ಗದ್ದುಗೆಗೆ ಪೂಜಾ ಕಾರ್ಯಕ್ರಮ ನೆರವೇರಿಸಿ, ಮದ್ಹಾಹ್ನ 1:00 ಗಂಟೆಗೆ ಸಲ ಕಲಾ ವಾಧ್ಯ ವೈಭವಗಳೊಂದಿಗೆ ಅಮೃತೇಶ್ವರ ಮಂದಿರ ಹಾಗೂ ವಿಶ್ವಾರಾದ್ಯರ ಜನ್ಮಭೂಮಿ ಪಂಚಗೃಹ ತಾಪಕಟ್ಟೆ ಹಿರೇಮಠದಿಂದ ಪಾದಯಾತ್ರೆ ಆರಂಭಗೊಂಡಿತು. ಈ ವೇಳೆ ಕೇರಳದ ಚಂಡಿ ಮೇಳ, ಪುರವಂತರ ಸೇವೆ, ಡೊಳ್ಳು ಕುಣಿತ, ಹಲಿಗೆ ಹೀಗೆ ಹಲವಾರು ಕಲಾ ತಂಡಗಳು ಭಾಗವಹಿಸಿದ್ದವು.
ಪಾದಯಾತ್ರೆಯಲ್ಲಿ ಶಾಸಕ ಡಾ.ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅದ್ಯಕ್ಷ ಧರ್ಮಣ್ಣ ದೊಡ್ಡಮನಿ, ಶಾಸಕ ಬಸವರಾಜ ಮತ್ತಿಮಡು ಧರ್ಮಪತ್ನಿ ಜಯಶ್ರೀ ಮತ್ತಿಮಡು, ಚನ್ನಾರೆಡ್ಡಿ ಪಾಟೀಲ ತುನ್ನೂರ, ಸಿದ್ದು ಪಾಟೀಲ ಮಳಗಿ, ಚನ್ನಪ್ಪ ಮೋಸಂಬಿ ಯಾದಗಿರಿ, ಮಲ್ಲರೆಡ್ಡಿಗೌಡ ಹೋತಪೇಠ, ವೆಂಕಟರೆಡ್ಡಿ ಮಾಲಿಪಾಟೀಲ, ಮಲ್ಲಿನಾಥಗೌಡ ಯಲಗೋಡ, ರಾಜಶೇಖರ ಸೀರಿ, ವಿಜಯಕುಮಾರ ಪೊಲೀಸ್ ಪಾಟೀಲ, ಕಲ್ಯಾಣಕುಮಾರ ಸಂಗಾವಿ, ಮಠದ ವಕ್ತಾರ ಸುಭಾಶ್ಚಂದ್ರ ಕೌಲಗಿ, ರಾಮಶೆಟ್ಟೆಪ್ಪ ಸಾಹು ಹುಗ್ಗಿ, ರುದ್ರಮುನಿ ಸ್ಥಾವರಮಠ, ಸೋಮಶೇಖರಯ್ಯ ಹಿರೇಮಠ, ರಾಜು ಸಾಹು ರೆಡ್ಡಿ, ಶಾಂತಯ್ಯ ಸ್ಥಾವರಮಠ, ದೊಡ್ಡಪ್ಪಗೌಡ ಮಾಲಿಪಾಟೀಲ, ದೇವಿಂದ್ರಪ್ಪ ರೂಗಿ, ಶಿವಶರಣಪ್ಪ ಮಾಸ್ತರ, ಚನ್ನಪ್ಪಗೌಡ ಬಿರಾದಾರ ಸೇರಿದಂತೆ ಸಹಸ್ರಾರು ಜನ ಭಾಗವಹಿಸಿದ್ದರು.
ಗಂವ್ಹಾರದಿಂದ ಹೊರಟ ಪಾದಯಾತ್ರೆ ಗ್ರಾಮದ ಸೀಮಾಂತರದಲ್ಲಿ ಊರಿನ ಚನ್ನಪ್ಪ ಸಾಹು ಬಿರೇದಾರ ಅವರ ಹೊಲದಲ್ಲಿ ನಿರ್ಮಿಸಿದ ಗುರುಮಂಟಪದಲ್ಲಿ ಶ್ರೀಗಳ ಪಾದಪೂಜೆ ನಂತರ ಶಹಾಪೂರ ತಾಲೂಕಿನ ಅಣಬಿ, ಶಿರವಾಳ ಗ್ರಾಮದಲ್ಲಿ ಶಹಾಪೂರ ಮಾಜಿ ಶಾಸಕ ಗುರುಗೌಡ ಪಾಟೀಲ ನೇತೃತ್ವದಲ್ಲಿ ಸಾಯಬಣ್ಣ ಶರಣರ ಹೊಲದಲ್ಲಿ ಪ್ರಸಾದ ಸ್ವೀಕರಿಸಿದ ನಂತರ ಊರಸಗುಂಡಗಿ, ಸನ್ನತ್ತಿ ಕ್ಷೇತ್ರ ತಲುಪಿತು.
  ಇಂದು ಬುಧವಾರ ಎರಡನೇ ದಿನದ ಪಾದಯಾತ್ರೆ ಕನಗಾನಹಳ್ಳಿ ಮಾರ್ಗವಾಗಿ ಹೊರಟು ಉಳವಂಡಗೇರಾ, ಬನ್ನೆಟ್ಟಿ, ತಳಕ, ಹೆಡಗಿಮುದ್ರಾ ಶ್ರೀಶಾಂತಶಿವಯೋಗಿ ಮಠ ತಲುಪುವುದು. ಮೂರನೇ ದಿನದ ಪಾದಯಾತ್ರೆ ಅಮವಾಸ್ಯೆ ವಿಶೇಷ ಪೂಜಾ ವಿಧಾನಗಳನ್ನು ಹಾಗೂ ಪಲ್ಲಕ್ಕಿ ಮೂರ್ತಿ ಗಂಗಾಸ್ನಾನ ನೆರವೇರಿಸಿಕೊಂಡು ಠಾಣಾಗುಂದಿ ಗ್ರಾಮದ ಮೂಲಕ ಅಬ್ಬೆತುಮಕೂರ ಕ್ಷೇತ್ರ ತಲುಪಲಿದೆ. ಸಂಜೆ ಶಿವಾನುಭವ ಗೋಷ್ಠಿ, ಸಂಗೀತ ಕಾರ್ಯಕ್ರಮ ಜರುಗುವುದು.