ಗಂಧಧಗುಡಿ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಸನ್ಮಾನ

ಸಂಜೆವಾಣಿ ನ್ಯೂಸ್
ಮೈಸೂರು : ನ.15:- ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಪುನೀತ್ ರಾಜಕುಮಾರ್ ರವರ ಎರಡನೇ ವರ್ಷದ ನೆನಪಿನಲ್ಲಿ ನಡೆದ ಗಂಧಧಗುಡಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳುಗಳನ್ನ ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರು ದಸರಾ ವಸ್ತುಪ್ರದರ್ಶನದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್ ಜಿ. ಗೌಡ ರವರು ವಿಜೇತರಿಗೆ ಸನ್ಮಾನಿಸಿ ಪ್ರಶಸ್ತಿಪತ್ರವನ್ನ ವಿತರಿಸಿದರು.
ಗಂಧದ ಗುಡಿ ಚಿತ್ರಕಲಾ ಸ್ಪರ್ಧೆಯಲ್ಲಿ 8ರಿಂದ 12ವರ್ಷದ ಮಕ್ಕಳ ವಿಭಾಗದಲ್ಲಿ ಪ್ರಥಮ – ಕ್ಷಿತಿ.ಎಸ್, ದ್ವೀತೀಯ- ದೃತಿ ವಿ ಶಾ, ತೃತೀಯ- ವೇದಶ್ರೀ, ನಾಲ್ಕನೇ -ಆದ್ಯ ಶೆಟ್ಟಿ, ಐದನೇ- ಅನ್ಸಿಕಾ ರಾಜ್ ನಾಯಕ್ 12ರಿಂದ 18ವರ್ಷದ ವಿಭಾಗ ಪ್ರಥಮ-ತೇಜಸ್ವಿನಿ.ಬಿ, ದ್ವಿತೀಯ-ಮನೋಜ್ ಆರ್, ತೃತೀಯ-ವರ್ಷ ಎಂ, ನಾಲ್ಕನೇ- ದೀಕ್ಷಾ, ಐದನೇ -ಭಾವನ, 18ವರ್ಷದ ಮೇಲ್ಪಟ್ಟವರು ಪ್ರಥಮ-ಭಂಗಾರ ಟಿ.ಆರ್, ದ್ವಿತೀಯ- ರಾಣಿ, ತೃತೀಯ- ವಿನುತ, ನಾಲ್ಕನೇ- ಭಾವನ. ಎಸ್, ಐದನೇ-ರಶ್ಮಿ,
ಇದೇ ಸಂಧರ್ಭದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್.ಜಿ ಗೌಡ ರವರು ಮಾತನಾಡಿ ಮೈಸೂರು ಕಲೆ ಸಂಸ್ಕೃತಿ ಸಾಹಿತ್ಯ ಶಿಕ್ಷಣ ಪರಂಪರೆ ಸ್ವಚ್ಛತೆಗೆ ವಿಶ್ವವಿಖ್ಯಾತವಾಗಿದೆ, ಮೈಸೂರಿನ ಸಾಂಸ್ಕೃತಿಕತೆ ಜೊತೆಯಲ್ಲೆ ಪ್ರಕೃತಿ ಪರಿಸರ ಉಳಿಸಿ ಕಾಪಾಡುವಲ್ಲಿ ಮಕ್ಕಳ ಪಾತ್ರ ಬಹಳ ಮಹತ್ವವಾದುದು ಇಂದಿನ ಮಕ್ಕಳೇ ನಮ್ಮ ದೇಶದ ಭವಿಷ್ಯದ ಆಸ್ಥಿ, ಸಮಾಜದಲ್ಲಿ ನೂರು ವ್ಯಕ್ತಿಗಳ ಪರಿಚಯಕ್ಕಿಂತ ಒಂದು ಪುಸ್ತಕ ಬಹಳ ಪ್ರಭವಾಬೀರುತ್ತದೆ, ಮಕ್ಕಳು ಹೆಚ್ಚಾಗಿ ಸಾಹಿತ್ಯಾ ಅಭಿರುಚಿ ಬೆಳೆಸಿಕೊಳ್ಳಬೇಕು ನಮ್ಮ ದೇಶದ ಇತಿಹಾಸ ವಿಜ್ಞಾನ ಮಾಹಿತಿಯ ಪುಸ್ತಕಗಳನ್ನ ಹೆಚ್ಚಾಗಿ ಸಂಗ್ರಹಿಸಿ ಅದರಿಂದ ಜ್ಞಾನ ಸಂಪಾದಿಸಿಕೊಳ್ಳಬೇಕು, ನಟ ಪುನೀತ್ ರಾಜಕುಮಾರ್ ರವರು ಸಹ ಪರಿಸರ ಅರಣ್ಯ ಬೆಟ್ಟಗುಡ್ಡ ನದಿಸಮುದ್ರ ಜಲಪಾತದ ಬಗ್ಗೆ ಹೆಚ್ಚಾಗಿ ಪರಿಸರ ಕಾಳಜಿಯ ಸಂದೇಶವನ್ನ ಸಮಾಜಕ್ಕೆ ಸಾರಿದ್ದಾರೆ, ದಸರಾ ವಸ್ತುಪ್ರದರ್ಶನದಲ್ಲಿ ಪ್ರತಿವರ್ಷ ಪುನೀತ್ ರಾಜಕುಮಾರ್ ರವರ ನೆನಪಿನಲ್ಲಿ ಪರಿಸರ ಕಾಳಜಿಯನ್ನ ಮಕ್ಕಳಲ್ಲಿ ಹೆಚ್ಚಾಗಿ ಪಸರಿಸಲು ಗಂಧಧಗುಡಿ ಚಿತ್ರಕಲಾಸ್ಪರ್ಧೆ ಆಯೋಜಿಸುತ್ತಾ ಬರಲಾಗುತ್ತಿದೆ ಎಂದರು
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಜೇಶ್ ಜಿ ಗೌಡ, ದಸರಾ ವಸ್ತುಪ್ರದರ್ಶನ ಗುತ್ತಿಗೆದಾರ ಜಿಪಿಎ ಮಲ್ಲಿಕಾರ್ಜುನ ಮಲ್ಲಿಕ್, ಮಂಜು ಜಿ ಗೌಡ, ಎಡ್ವಿನ್, ದಸರಾ ವಸ್ತುಪ್ರದರ್ಶನ ನಿರೂಪಕ ಅಜಯ್ ಶಾಸ್ತ್ರಿ, ಮಿರ್ಲೆ ಪಣೀಶ್, ಯೋಗಾ ಅನಂತು, ಆಜಾಮ್, ಸರ್ದಾರ್ ಶರೀಫ್, ರತನ್ ಚಿಕು, ದೀಕ್ಷಿತ್, ವೆಂಕಟೇಶ್, ಸುರೇಶ್, ಮಹೇಶ್, ಮುಂತಾದವರು ಇದ್ದರು.