
ಚನ್ನಮ್ಮನ ಕಿತ್ತೂರ,ಮಾ.24: 24 ಸಮೀಪದ ಗಂಧದನಾಡು ಗಂದಿಗವಾಡ ಗ್ರಾಮದಲ್ಲಿ ಸೂರ್ಯನಾರಾಯಣ ಮತ್ತು ರಾಮಲಿಂಗೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಅದ್ದೂರಿಯಾಗಿ ನೆರೆವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಿಜೆಪಿ ಮುಖಂಡ ಬಸವರಾಜ ಹಪ್ಪಳಿ ಕುಸ್ತಿ ಉದ್ಘಾಟಿಸಿ ಮಾತನಾಡಿದರು. ಇಂತಹ ಧಾರ್ಮಿಕ ಜಾತ್ರಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದರಿಂದ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ. ಮಳೆ,ಬೆಳೆ ಸಮೃದ್ಧಿ ಕಾಣುತ್ತೇವೆ. ಇದು ಇಂದಿನ ಯುವಪೀಳಿಗೆಗೆ ಮಾರ್ಗಸೂಚಿ ಎಂದರು.
ಕುಸ್ತಿಪಟುಗಳು ಹೊರರಾಜ್ಯ ಮತ್ತು ಆಯಾ ಜಿಲ್ಲೆಗಳಿಂದ ಆಗಮಿಸಿದ್ದರು. ಸ್ಪರ್ಧೆಗಳು ಪ್ರೇಕ್ಷಕರನ್ನು ನಿಬ್ಬೆರಗಿಸಿದ್ದವು.
ಕುಸ್ತಿಯ ಕಣದ ಪೂಜೆ ಗೋಕಾಕದ ಈರಯ್ಯಾ ಮಠದ ಇವರಿಂದ ನೇರವೇರಿತು.
ಸ್ಪರ್ಧೆಗೆ ರೂ. 25000 ದೇಣಿಗೆಯಾಗಿ ಖಾನಾಪೂರ ಬಿಜೆಪಿ ಪ್ರಭಾರಿ ಹಾಗೂ ಬೆಳಗಾವಿ ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ, ಮತ್ತು ನಿಯತಿ ಪೌಡೇಷನ್ ಅಧ್ಯಕ್ಷಣಿ ಡಾ. ಸೋನಾಲಿ ಸರ್ನೋಬತ್ ಮತ್ತು ಉದ್ಯಮಿ ಹಾಗೂ ಜೆಡಿಎಸ್ ಕೋರ ಕಮಿಟಿ ಸದಸ್ಯ ನಾಸೀರ ಬಾಗವಾನ್ ರೂ. 25000 ತಲಾ ದೇಣಿಯಾಗಿ ನೀಡಿದ್ದಾರೆ.
ಈ ವೇಳೆ ವಿಶ್ವನಾಥ ಹಿಟ್ಟಿನ, ವಿಜಯ ಕುಲಕರ್ಣಿ, ಈರಯ್ಯಾ ಹಿರೇಮಠ, ವೀರಭದ್ರಯ್ಯಾ ಚಿಕ್ಕಮಠ, ದೇಸಾಯಿ ಗಾಳಿ, ನಾಗಯ್ಯಾ ಹಿರೇಮಠ, ಬಾಬು ಯಮಕನಮರಡಿ, ಮಹಾಂತೇಶ ಮೂಲಿಮನಿ, ತನ್ವಿರ ಬಾಗವಾನ, ಜಗದೀಶ ಮೂಲಿಮನಿ, ರಾಜು ಮೂಲಿಮನಿ, ಶಿವಪುತ್ರ ತಳವಾರ, ಪರಶುರಾಮ ಮೇದಾರ, ಜಯಪಾಲ ನಾಯ್ಕರ, ಮಲ್ಲಪ್ಪ ಕುರೇರ, ಈರಪ್ಪ ಮೂಲಿಮನಿ, ರಾಜು ಜವಳಿ, ನಿಂಗಪ್ಪ ಅಂಗಡಿ, ರುದ್ರಪ್ಪ ಶೆಟ್ಟನ್ನವರ ಇತರರಿದ್ದರು.