ಗಂಡು ಹೆಣ್ಣಿಗೂ ಸಮಾನ ಕೂಲಿ: ಮಹಾಂತೇಶ ಜಮಾದಾರ

ಕಲಬುರಗಿ.ಏ.17: ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರಿಗೆ ಗಂಡು-ಹೆಣ್ಣಿಗೂ ಸಮಾನ ಕೂಲಿ ಎಂದು ದೇವಲ ಗಾಣಗಾಪೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹಾಂತೇಶ ಜಮಾದಾರ ಹೇಳಿದರು.
ಶನಿವಾರ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮರ್ಜಾ ನಾಲಾ ಹೊಳು ಎತ್ತುವ ಕಾಮಗಾರಿಯಲ್ಲಿ “ದುಡಿಯೋಣ ಬಾ ಅಭಿಯಾನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇಸಿಗೆ ಕಾಲದಲ್ಲಿ ಯಾರು ಕೂಡ ವಲಸೆ ಹೋಗದೇ ಸ್ವಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ತಿಳಿದು ಇಲ್ಲಿಯೆ ಕೂಲಿ ಮಾಡಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ, ಐಇಸಿ ಸಂಯೋಜಕರು ಸೇರಿದಂತೆ ಕೂಲಿ ಕಾರ್ಮಿಕರು ಇದ್ದರು.