ಗಂಡು ಮೆಟ್ಟಿದ ನಾಡಲ್ಲಿ ಕನ್ನಡವೇ ಗಂಡು ಭಾಷೆ


ಚಿತ್ರದುರ್ಗ: ನ. ೩೦; ಕನ್ನಡ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ, ಐತಿಹಾಸಿಕ ಹಿನ್ನಲೆ ಇದೆ. ಕನ್ನಡ ಭಾಷೆ ಸರಳ, ಸಹಜ, ಇಂಪು ಸಹ. ಜಾಗತೀಕರಣದ ಪ್ರಭಾವದಿಂದ ಇಂದು ಎಷ್ಟೋ ಸಾಂಪ್ರದಾಯಿಕ ಕಲೆಗಳು, ವಸ್ತುಗಳು,ಕನ್ನಡ ತನವನ್ನು ಕಳೆದುಕೊಳ್ಳುತ್ತಿವೆ. ನಾವು ಅಸಚರಿಸುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಕರ್ನಾಟಕದ ಗತವೈಭವ ಮರುಕಳಿಸುವಂತಾಗಬೇಕು.” ಎಂದು ಚಿತ್ರದುರ್ಗ ಕೋಟೆ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಅಭಿಪ್ರಾಯಪಟ್ಟರು.
ಅವರು ಚಿತ್ರದುರ್ಗ ಕೋಟೆ ವಾಯು ವಿಹಾರಿಗಳ ಸಂಘ ಹಾಗೂ ಮಹರ್ಷಿ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ಕೋಟೆ ಆವರಣದಲ್ಲಿ  ಹಮ್ಮಿಕೊಳ್ಳಲಾಗಿದ್ದ ೬೬ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂದುವರೆದು ಮಾತನಾಡಿ “ಚಿತ್ರದುರ್ಗ ಜಿಲ್ಲೆಗೆ ಆಂದ್ರ ಸಮೀಪವಿದ್ದು ಕೆಲಸಕ್ಕಾಗಿ ಇಲ್ಲಿಗೆ ವಲಸೆ ಬರುವ ಕಾರ್ಮಿಕರು ಕನ್ನಡ ಹೋಗಬೇಕು ಹಂಡುಮೆಟ್ಟಿದ ಚಿತ್ರದುರ್ಗದಲ್ಲಿ ಕನ್ನಡವೇ ಗಂಡುಭಾಷೆಯಾಗಿ ಉಳಿಯಬೇಕು ಅದಕ್ಕಾಗಿ ಕನ್ನಡ ಬೆಳೆಸುವ ಯಾವುದೇ ಕಾರ್ಯಕ್ರಮಕ್ಕೆ ನಮ್ಮ ಕೋಟೆ ವಾಯುವಿಹಾರಿಗಳ ಸಂಘ ಎಲ್ಲಾ ರೀತಿಯ ಸಹಕಾರನೀಡಲು ಸಿದ್ಧವಿದೆ” ಎಂದು ತಿಳಿಸಿದರು.
ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಚಿತ್ರದುರ್ಗ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಎಚ್.ಶ್ರೀನಿವಾಸ್ ಮಾತನಾಡಿ ” ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸುವ ಹುನ್ನಾರ ಇರುವುದರಿಂದ ಪ್ರಾದೇಶಿಕ ಭಾಷೆಗಳ ಮೇಲೆ ವ್ಯಾವಸ್ಥಿಕವಾದ ಪ್ರಹಾರ ನಡೆಯುತ್ತಲೇ ಇದೆ.ನಮ್ಮ ಕನ್ನಡ ಭಾಷೆಯನ್ನು ಯಾವ ರೀತಿಯಾಗಿ ಉಳಿಸಿ ಬೆಳಸಬೇಕು ಎಂಬುದರ ಬಗ್ಗೆ ಚಿಂತಿಸುವ ಅಗತ್ಯವಿದೆ.’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜಕ್ಕಾಗಿ ಶ್ರಮಿಸಿದ ಹಲವು ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ನಗರಸಭೆ ನಾಮನಿರ್ದೇಶಿತ ಸದಸ್ಯರಾದ ರಮೇಶ್ ಆಚಾರ್,ತಿಮ್ಮಪ್ಪ  ಉಪನ್ಯಾಸಕ ಕೆಂಚವೀರಪ್ಪ, ಲೇಖಕಿ ದಯಾವತಿ ಪುತ್ತೂರ್ಕರ್, ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಬಿ.ಆರ್.ನಾಗರಾಜ್,ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ರಾಮಜ್ಜ, ನಿವೃತ್ತ ಎಸ್.ಐ. ಮಲ್ಲಿಕಾರ್ಜುನಚಾರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
Attachments area