ಗಂಡು ಮಗುವಿನ ಪೋಷಕರ ಪತ್ತೆಗೆ ಮನವಿ

ಕಲಬುರಗಿ.ನ.9:ಕಲಬುರಗಿ ತಾಲೂಕಿನ ಹೀರಾಪುರ ಗ್ರಾಮದ ನಿರಗುಡಿ ಮಲ್ಲಯ್ಯ ದೇವಸ್ಥಾನದ ಹತ್ತಿರದಲ್ಲಿ ಸೆಪ್ಟೆಂಬರ್ 20ರಂದು ಪತ್ತೆಯಾದ ಸುಮಾರು 4 ವರ್ಷದ ದೀಪಕ ತಂದೆ ಬಾಬು ಎಂಬ ಗಂಡು ಮಗುವನ್ನು ಪಾಲನೆ, ಪೋಷಣೆಗಾಗಿ ಕಲಬುರಗಿಯ ಡಾನ್‍ಬಾಸ್ಕೋ ಪ್ಯಾರ್ ಮಕ್ಕಳ ಸಹಾಯವಾಣಿ ಇವರ ಮೂಲಕ ಅದೇ ದಿನದಂದು ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಲಾಗಿದೆ ಎಂದು ಕಲಬುರಗಿ ಅಮೂಲ್ಯ ಶಿಶು ಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಳುಪು ಬಣ್ಣ ಹೊಂದಿರುವ ಈ ಗಂಡು ಮಗುವಿನ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ. ಈ ಗಂಡು ಮಗುವಿನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 120 ದಿನದೊಳಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಅಧೀಕ್ಷಕರು, ಅಮೂಲ್ಯ ಶಿಶು ಗೃಹ, ಆಳಂದ ರಸ್ತೆ ಕಲಬುರಗಿ ಕಚೇರಿಗೆ ಭೇಟಿ ನೀಡಬೇಕು. ಮಕ್ಕಳ ಪಾಲಕ, ಪೋಷಕರು ಬಾರದಿದ್ದಲ್ಲಿ ಕಾನೂನು ಪ್ರಕಾರ ಈ ಗಂಡು ಮಗುವಿನ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಮೂಲ್ಯ ಶಿಶುಗೃಹದ ಅಧೀಕ್ಷಕರನ್ನು ದೂರವಾಣಿ ಸಂಖ್ಯೆ 08472-265588 ಹಾಗೂ ಮೊಬೈಲ್ ಸಂಖ್ಯೆ 7406550788ಗೆ ಸಂಪರ್ಕಿಸಬೇಕೆಂದು ಕೋರಿದ್ದಾರೆ.