ಗಂಡು ಮಗುವಿಗೆ ಜನ್ಮ ನೀಡಿದ ಅನುಷ್ಕಾ

ನವದೆಹಲಿ,ಫೆ.೨೧-ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅಭಿಮಾನಿಗಳಿಗೆ ಗಂಡು ಮಗುವಿಗೆ ಜನ್ಮ ನೀಡಿರುವ ಸಿಹಿ ಸುದ್ದಿ ಬಂದಿದೆ.
ಇಬ್ಬರೂ ತಮ್ಮ ಎರಡನೇ ಮಗುವಿನ ಆಗಮನವನ್ನು ಘೋಷಿಸಿದ್ದಾರೆ. ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರ ಅಭಿಮಾನಿಗಳು ಜೋಡಿಯನ್ನು ಅಭಿನಂದಿಸಿದ್ದಾರೆ.
ಮಗು ಜನಿಸಿದ ಐದು ದಿನಗಳ ನಂತರ ಕ್ರಿಕೆಟಿಗ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಈ ವಿಷಯ ತಿಳಿಸಿದ್ದಾರೆ. ಮಗುವಿಗೆ ‘ಅಕೈ’ ಎಂದು ನಾಮಕರಣ ಮಾಡಲಾಗಿದೆ ಎಂದಿದ್ದಾರೆ.
ಫೆಬ್ರವರಿ ೧೫ ರಂದು ಗಂಡು ಮಗು ಜನಿಸಿದೆ ಎಂದು ವಿರುಷ್ಕಾ ದಂಪತಿ ಹೇಳಿದ್ದಾರೆ. ತಮ್ಮ ಮಗಳು ವಾಮಿಕಾಗೆ ಕಿರಿಯ ಸಹೋದರನಿದ್ದಾನೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ದಂಪತಿಗಳು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಹೇಳಿಕೆಯಲ್ಲಿ ಹೀಗೆ ಬರೆದಿದ್ದಾರೆ, ’ಅತ್ಯಂತ ಸಂತೋಷ ಮತ್ತು ಪ್ರೀತಿಯಿಂದ, ಫೆಬ್ರವರಿ ೧೫ ರಂದು ನಾವು ನಮ್ಮ ಗಂಡು ಮಗು, ವಾಮಿಕಾ ಅವರ ಕಿರಿಯ ಸಹೋದರ ಅಕೈ ಅವರನ್ನು ಜಗತ್ತಿಗೆ ಸ್ವಾಗತಿಸಿದೆವು. ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳು ಬೇಕು. ಅಲ್ಲದೆ, ಇಂತಹ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸುವಂತೆ ಕೇಳಿಕೊಳ್ಳುತ್ತೇವೆ’ ಎಂದು ವಿರುಷ್ಕಾ ದಂಪತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ೨೦೧೭ ರಲ್ಲಿ ವೈರುಷ್ಕಾ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ೨೦೨೧ ರಲ್ಲಿ ಅನುಷ್ಕಾ ಮತ್ತು ವಿರಾಟ್ ವಾಮಿಕಾಗೆ ಜನ್ಮ ನೀಡಿದ್ದಾರೆ.
ಇದೇ ವೇಳೆ, ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಮೊದಲ ಬಾರಿಗೆ ಬಹಿರಂಗಪಡಿಸಿದ್ದರು. ಸದ್ಯಕ್ಕೆ ಕೊಹ್ಲಿ ಕ್ರಿಕೆಟ್ ಆಡುತ್ತಿಲ್ಲ ಮತ್ತು ಅವರು ಚೆನ್ನಾಗಿದ್ದಾರೆ ಎಂದು ಡೆಲಿವಿಯರ್ಸ್ ಇತ್ತೀಚೆಗೆ ಹೇಳಿದ್ದಾರೆ. ಪ್ರಸ್ತುತ ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಸಚಿನ್ ಶುಭ ಹಾರೈಕೆ
ವಿರಾಟ್ ಕೊಹ್ಲಿ ದಂಪತಿ ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿ ತಿಳಿದ ತಕ್ಷಣ ವಿಶ್ವದಾದ್ಯಂತ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ವಿರುಷ್ಕಾ ದಂಪತಿಗೆ ಶುಭ ಕೋರಿದ್ದಾರೆ. ಸಚಿನ್ ತೆಂಡೂಲ್ಕರ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಮತ್ತು ಅನುಷ್ಕಾಗೆ ಶುಭ ಹಾರೈಸಿದ್ದಾರೆ. ನಿಮ್ಮ ಸುಂದರ ಕುಟುಂಬಕ್ಕೆ ಅಮೂಲ್ಯ ಅಕೈಯನ್ನು ಕರೆತಂದಿದ್ದಕ್ಕಾಗಿ ಸಚಿನ್ ವಿರಾಟ್ ಮತ್ತು ಅನುಷ್ಕಾಗೆ ಅಭಿನಂದನೆಗಳು ಎಂದು ಪೋಸ್ಟ್ ಮಾಡಿದ್ದಾರೆ. ಅಕೈ ಹೆಸರಿನಲ್ಲಿ ಹುಣ್ಣಿಮೆ ಇದೆ ಎಂದಿರುವ ಸಚಿನ್. ಮಗುವಿನಿಂದ ಮನೆಯಲ್ಲಿ ಬೆಳಕು ತುಂಬಿದೆ. ಅವನು ನಿಮಗೆ ಈ ಪ್ರಪಂಚದಲ್ಲಿ ಅಂತ್ಯವಿಲ್ಲದ ಸಂತೋಷ ಮತ್ತು ನಗೆಯಿಂದ ತುಂಬಿಸುತ್ತಾನೆ. ಜಗತ್ತಿಗೆ ಸ್ವಾಗತ.. ಲಿಟಲ್ ಚಾಂಪ್!’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ. ಕ್ರಿಕೆಟಿಗರಾದ ರಶೀದ್ ಖಾನ್, ಯುಜ್ವೇಂದ್ರ ಚಹಾಲ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಮತ್ತು ವರುಣ್ ಚಕ್ರವರ್ತಿ ಈಗಾಗಲೇ ವಿರಾಟ್ ಮತ್ತು ಅನುಷ್ಕಾಗೆ ಶುಭ ಹಾರೈಸಿದ್ದಾರೆ. ಹಲವು ಸೆಲೆಬ್ರಿಟಿಗಳು ತಮ್ಮದೇ ಶೈಲಿಯಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ಕೆಲವರು ವಿನೂತನ ಪೋಸ್ಟ್‌ಗಳನ್ನು ಮಾಡಿದ್ದಾರೆ.