ಗಂಡುಗಲಿ ಕುಮಾರರಾಮ ಕುರಿತು ಹೆಚ್ಚಿನ ಸಂಶೋಧನೆಗೆ ಕರೆ

ಗಂಗಾವತಿ ಏ 01 : ಗಂಡುಗಲಿ ಕುಮಾರರಾಮನ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ವಿದ್ಯಾರ್ಥಿಗಳಿಗೆ ಇತಿಹಾಸದ ಕುರಿತು ಸಮಗ್ರ ಮಾಹಿತಿ ಒದಗಿಸಬೇಕು ಎಂದು ವಿಜಯಪುರ ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ತುಲಸಿಮಾಲಾ ಹೇಳಿದರು.
ಸ್ಥಳೀಯ ಐಎಂಐ ಭವನದಲ್ಲಿ ರಾಜ್ಯ ಪತ್ರಗಾರ ಇಲಾಖೆ ಹಾಗೂ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ‌ಮಹಾವಿದ್ಯಾಲಯ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ
ಗಂಡುಗಲಿ ಕುಮಾರ ರಾಮ ಆರ್ದಶ ವ್ಯಕ್ತಿತ್ವ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶ ಶ್ರೀಮಂತ ಸಂಸ್ಕೃತಿ , ಪರಂಪರೆ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪ್ರಸ್ತುತತೆಯ ಪ್ರಸ್ತುತ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಬೇಕು. ಸಂಶೋಧಕರು ಮತ್ತು ಶಿಕ್ಷಣ ತಜ್ಞರಿಗೆ ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಇಂತಹ ರಾಷ್ಟ್ರೀಯ ವಿಚಾರ ಸಂಕಿರಣ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಮಾರರಾಮ ಅಪ್ರತಿಮ ವೀರ‌.ಅತೀ ಹೆಚ್ಚು ಮೌಖ್ಯ ಕಾವ್ಯ ರಚನೆಯಾಗಿರುವುದು ಆತನ ಜನಪ್ರಿಯತೆಗೆ ಸಾಕ್ಷಿ. ದಕ್ಷಿಣ ಭಾರತದ ಸ್ಥಳೀಯ ಚರಿತ್ರೆಯಲ್ಲಿ ಬಹುದೊಡ್ಡ ಹೆಸರು ಗಂಡುಗಲಿ ಕುಮಾರರಾಮ ವಿಜಯನಗರ ಪೂರ್ವದ. ಕುಮ್ಮಟದುರ್ಗ, ಕಂಪ್ಲಿ ಹಾಗೂ ಆನೆಗೊಂದಿ ಪ್ರದೇಶವನ್ನು ತಮ್ಮ ಮುಖ್ಯ ಸ್ಥಾನವಾಗಿಸಿಕೊಂಡು ಆಳ್ವಿಕೆ ನಡೆಸಿದ್ದ. ಅಲ್ಲದೇ ಕುಮಾರರಾಮನ ಕುರಿತಾದ ಕಾವ್ಯಗಳು, ನಾಟಕಗಳು, ಯಕ್ಷಗಾನ, ಸಿನಿಮಾ ಹೀಗೆ ಬಹು ಮಾಧ್ಯಮಗಳಿಂದ ಕುಮಾರರಾಮ ಜೀವಂತವಾಗಿದ್ದಾನೆ. ಈ ನಿಟ್ಟಿನಲ್ಲಿ ಕುಮಾರಾರಮ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕು ಎಂದರು‌.
ಕೆಎಸ್ ಸಿ ಮಹಿಳಾ ಕಾಲೇಜಿನ ಪ್ರಾರ್ಚಾಯ ಡಾ.ಶರಣಪ್ಪ ಕೋಲ್ಕಾರ್, ಅಲಮ್ಮಪ್ರಭು ಬೆಟ್ಟದೂರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ನಮ್ಮ ನೆಲೆ – ಸಂಸ್ಕೃತಿ ಎಂಬ ಕೃತಿಯನ್ನು ಗಣ್ಯರು ಲೋಕಾರ್ಪಣೆ ಮಾಡಿದರು.
ಈ ವೇಳೆ ಸಂಕಲ್ಪ ಎಜ್ಯುಕೇಷನ್ ಟ್ರಸ್ಟ ನ ಅಧ್ಯಕ್ಷ ಹೇಮತರಾಜ್ ಜಿ.ಕಲ್ಮಂಗಿ, ಕಾರ್ಯಾಧ್ಯಕ್ಷ ನಾಗರಾಜ್ ಎಸ್. ಗುತ್ತೆದಾರ, ಉಪಾಧ್ಯಕ್ಷ ಡಾ.ಎಂ.ಆರ್. ಮಂಜುಸ್ವಾಮಿ, ಬಸವರಾಜ್ ಎಲ್ ಕೇಸರಹಟ್ಟಿ, ಮಲ್ಲಿಕಾರ್ಜುನ ಸಿಂಗನಾಳ, ಅಮೀತ ಕುಮಾರ್ ರೆಡ್ಡಿ, ಪ್ರಾರ್ಚಾಯ ಬಸಪ್ಪ ಶಿರಿಗೇರಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಪಂಡರಿನಾಥ ಅಗ್ನಿಹೋತ್ರಿ ,ರಾಜೇಶ ನಾಯಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಜುಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.
ಸೌಮ್ಯ ಪ್ರಾರ್ಥಿಸಿದರು. ನಾಗರಾಜ್ ಎಚ್. ನಿರೂಪಿಸಿದರು.