ಗಂಡಿನಷ್ಟೆ ಹೆಣ್ಣು ಕೂಡ ಸಮಾನಳು

ಚಿಕ್ಕಬಳ್ಳಾಪುರ, ಮಾರ್ಚ್ ೧೫: ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಗಂಡಿನಷ್ಟೆ ಹೆಣ್ಣು ಕೂಡ ಆಸ್ತಿಯ ಪಾಲಿನಲ್ಲಿ ಸಮಾನಳು ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ಅರುಣ್ ಕುಮಾರಿ ರವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುನೈಟೆಡ್ ಡೇ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಾಧನೆಗಳ ಮಾಡಲು ಈ ದಿನ ಮುಖ್ಯ ಪ್ರೇರಕವಾಗಿದೆ. ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ಶೋಭಿಸುತ್ತಾರೆ ಎಲ್ಲಿ ಪುರುಷರಿಗಿಂತ ಮಹಿಳೆಯರು ಅಭಿವೃದ್ಧಿ ಹೊಂದುತ್ತಾರೋ ಅಲ್ಲಿ ಸ್ವಾಸ್ಥ ಸಮಾಜವನ್ನು ಕಾಣಬಹುದು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಲ್ಲರೂ ಬಹುತೇಕವಾಗಿ ತಿಳಿದಿರುತ್ತಾರೆ. ಆಸ್ತಿಯ ವಿಚಾರದಲ್ಲಿ, ಸಮಾನ ಕೆಲಸಕ್ಕೆ ಸಮಾನ ವೇತನದಲ್ಲಿ ಹೆಣ್ಣು ಕೂಡ ಸಮಾನಳು. ತಂದೆಯ ಆಸ್ತಿಯ ಪಾಲಿನಲ್ಲಿಯೂ ಸ್ತೀಯು ಸರ್ವ ಸಮಾನರು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಾಧಕ ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ಎಂ.ಧನುರೇಣುಕ ರವರು ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿಗೆ ಬರುವ ಚಿಕ್ಕ ಮಗುವಿನಿಂದ ಹಿಡಿದು ಗರ್ಭಿಣಿ ಮಹಿಳೆಯವರೆಲ್ಲರ ಜವಾಬ್ದಾರಿಯನ್ನು ಪ್ರತಿನಿತ್ಯ ಗಮನಿಸಿ ಸರ್ಕಾರದ ಸೌಲತ್ತುಗಳನ್ನು ಕಾಲ ಕಾಲಕ್ಕೆ ತಲುಪಿಸುತ್ತಿರುತ್ತಾರೆ. ಆ ಸಮಯದಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಪೌಷ್ಠಿಕ ಆಹಾರವನ್ನು ಪೂರೈಸುತ್ತಾರೆ ಇಂತಹ ಅಮೂಲ್ಯ ಸೇವೆ ವಿಚಾರದಲ್ಲಿ ನಿಮ್ಮಗಳ ಪಾತ್ರ ಮಹತ್ವವಾದದ್ದು, ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಈಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶರೆಡ್ಡಿ, ಜಿಲ್ಲಾ ನೋಂದಣಾಧಿಕಾರಿ ಶ್ರೀದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಯೋಜನಾ ನಿರೂಪನಾಧಿಕಾರಿ ರಮೇಶ್ ಸೇರಿದಂತೆ ವಿವಿಧ ಇಲಾಖೆಗೆಳ ಅಧಿಕಾರಿಗಳು ಸಿಬ್ಬಂದಿ, ಯುನೈಟೆಡ್ ವೇ ಸಂಸ್ಥೆಯ ಅಧ್ಯಕ್ಷ ಲೋಕೇಶ್, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.