ಗಂಡಾನೆ ಮರಿಯ ರಕ್ಷಣೆ

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಕೂರ್ಣೆಗಾಲ ಬಳಿ ಕಂದಕಕ್ಕೆ ಬಿದ್ದಿದ್ದ ಎರಡು ವರ್ಷದ ಗಂಡಾನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ಆನೆ ಮರಿ ಕಾಡಿನಿಂದ ನಾಡಿಗೆ ಬಂದು ಕಂದಕಕ್ಕೆ ಬಿದ್ದು ಹೊರಬರಲಾಗದೇ ಒದ್ದಾಡುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಜೆಸಿಬಿ ಸಹಾಯದಿಂದ ಆನೆ ಮರಿಯನ್ನು ರಕ್ಷಿಸಿದ್ದಾರೆ. ನಂತರ ತಾಯಿ ಆನೆ ಬಳಿ ಬಿಟ್ಟಿದ್ದಾರೆ.