ಗಂಡನ ಮನೆಯವರ ಕಿರುಕುಳಕ್ಕೆ ನರ್ಸ್ ಬಲಿ

ಕಲಬುರಗಿ,ಜೂ.3-ಗಂಡನ ಮನೆಯವರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಆಯುಷ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಟಾಫ್ ನರ್ಸ್ ಒಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಇಲ್ಲಿನ ಶಿವಾಜಿನಗರದಲ್ಲಿ ನಡೆದಿದೆ.
ಇಂದಿರಾ ಸಂಜೀವರೆಡ್ಡಿ (38) ಆತ್ಮಹತ್ಯೆಗೆ ಶರಣಾದವರು. ಇಂದಿರಾ ಮತ್ತು ಸಂಜೀವರೆಡ್ಡಿ ಅವರು ಮದುವೆಯಾಗಿ 18 ವರ್ಷಗಳಾಗಿದ್ದು, ಒಂದ ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದಾರೆ. ಆಯುಷ್ ಇಲಾಖೆಯ ಸೇಡಂನ ಆಯುರ್ವೇದಿಕ ಆಸ್ಪತ್ರೆಯಲ್ಲಿ ಇಂದಿರಾ ಅವರು ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಗಂಡನ ಮನೆಯವರು ನೀಡುತ್ತಿದ್ದ ಕಿರುಕುಳದಿಂದ ಇಂದು ಶಿವಾಜಿನಗರದಲ್ಲಿರುವ ಮನೆಯಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.