ಗಂಡನ ಕಾಟಕ್ಕೆ ಬೇಸತ್ತ ಪತ್ನಿ ಇಬ್ಬರು ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ: ಬಾಲಕಿ ಸಾವು

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.13:- ಕುಡುಕ ಗಂಡನ ಗಲಾಟೆಯಿಂದ ಬೇಸತ್ತ ಪತ್ನಿತನ್ನಇಬ್ಬರು ಮಕ್ಕಳುಗಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಧುವಿನಹಳ್ಳಿ ನಿವಾಸಿ ಮಾದೇಶ್‍ಎಂಬಾತ ಪದೇ ಪದೇಕುಡಿದು ಬಂದು ಪತ್ನಿ ಮಕ್ಕಳ ಮೇಲೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಗಂಡ ಮಾದೇಶ್‍ನ ಕಾಟಕ್ಕೆ ಬೇಸತ್ತ ಹೆಂಡತಿ ಶೀಲ. ತನ್ನ ಇಬ್ಬರು ಮಕ್ಕಳಿಗೂ ವಿಷ ಕುಡಿಸಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಎಂಟು ವರ್ಷದ ಮಗಳು ಸಿಂಧು ಸಾವನ್ನಪ್ಪಿದ್ದಾಳೆ. ಸ್ಥಳೀಯರು ಹಾಗೂ ಸಂಬಂಧಿಕರು ಆಸ್ಪತ್ರೆಗೆ ತರುವಷ್ಟರಲ್ಲಿ ಎಂಟು ವರ್ಷದ ಹೆಣ್ಣು ಮಗು ಸಾವು. ತಾಯಿ ಶೀಲ (25), ಯಶವಂತ್ (12), ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೆÇಲೀಸರ ಭೇಟಿ ಪರಿಶೀಲನೆ.