ಗಂಟೆ 11 ಆದರೂ ಅಧಿಕಾರಿ-ಸಿಬ್ಬಂದಿಗಳ ಗೈರು: ಆಕ್ರೋಶ

ಹನೂರು:ಮಾ:25: ತಾಲ್ಲೂಕಿನ ಕಣ್ಣೂರು ಗ್ರಾ.ಪಂ.ಕಾರ್ಯಾಲಯಕ್ಕೆ ಬೆಳಿಗ್ಗೆ 11 ಗಂಟೆ ಸಮೀಪಿಸುತ್ತಿದ್ದರೂ ಒಬ್ಬರೇ ಒಬ್ಬ ಅಧಿಕಾರಿಯಾಗಲೀ ಸಿಬ್ಬಂದಿಯಾಗಲಿ ಬಾರದೇ ಇರುವ ಹಿನ್ನಲೆಯಲ್ಲಿ ಇಲ್ಲಿನ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ವತಃ ಗ್ರಾಮಸ್ಥರೇ ಗ್ರಾ.ಪಂ.ಕಾರ್ಯಾಲಯದ ಖಾಲಿ ಖಾಲಿ ಕುರ್ಚಿಗಳ ಸಹಿತ ಪೋಟೋ ಮತ್ತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೇಜವಬ್ದಾರಿತನ ಮತ್ತು ನಿರ್ಲಕ್ಷ್ಯವನ್ನು ಕಟುವಾಗಿ ಖಂಡಿಸಿದ್ದಾರೆ.
ಸಾರ್ವಜನಿಕರ ಸೇವೆಯನ್ನು ಮಾಡಬೇಕಾದ ಗ್ರಾ.ಪಂ. ಅವರು ನಿಗಧಿತ ಸಮಯಕ್ಕೆ ಪ್ರತಿನಿತ್ಯವು ಹಾಜರಾಗದೇ ಇರುವುದು ಇಲ್ಲಿನ ಸಾರ್ವಜನಿಕರನ್ನು ಕೆರಳಿಸಿದೆ. ಮುಂದಾದರೂ ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತಾ ಗಮನಹರಿಸಿ ಬೇಜವಬ್ದಾರಿತನ ತೋರುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬಗ್ಗೆ ಕ್ರಮ ವಹಿಸಬೇಕೆಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ದಾರೆ.