ಗಂಟಲಿನ ಕಫ ನಿವಾರಣೆಗೆ ಸರಳ ಮಾರ್ಗ

ಬಿಸಿ ನೀರಲ್ಲಿ ಉಪ್ಪು ಹಾಕಿ ದಿನಕ್ಕೆ 2 ರಿಂದ 3 ಬಾರಿ ಬಾಯಿಗೆ ಹಾಕಿ ಗಾರ್ಗಲ್‌ ಮಾಡಿದರೆ ಗಂಟಲಿನಲ್ಲಿರುವ ಕಫ ನಿವಾರಣೆಯಾಗುತ್ತದೆ.
ಗಂಟಲಿನಲ್ಲಿ ಕಫ ಹೆಚ್ಚಿದ್ದರೆ ನಿಂಬೆ ಹಣ್ಣಿನ ತುಂಡಿಗೆ ಸ್ವಲ್ಪ ಸೈಂಧವ ಉಪ್ಪು ಮತ್ತು ಕರಿಮೆಣಸಿನ ಪುಡಿ ಉದುರಿಸಿ ಆ ರಸವನ್ನು ಸೇವಿಸಿದರೆ ಕಫ ಶಮನವಾಗುತ್ತದೆ.
ಹಸಿಶುಂಠಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಕಲಸಿ ದಿನಕ್ಕೆ 2-3 ಬಾರಿ ಕುಡಿದರೆ ಕಫ ಬೇಗ ಕರಗುತ್ತದೆ.
ಚಕ್ಕೆ ಮತ್ತು ಹಸಿ ಶುಂಠಿಯನ್ನು ನೀರಲ್ಲಿ ಸೇರಿಸಿ ಮಾಡಿದ ಕಷಾಯವನ್ನು ದಿನಕ್ಕೆ 3 ಬಾರಿ ಸೇವಿಸಿದರೆ ಗಂಟಲ ಕಫ ಶಮನವಾಗುತ್ತದೆ.
ಒಂದು ಚಮಚ ಅರಿಶಿನ ಪುಡಿಯನ್ನು ಬಿಸಿನೀರಲ್ಲಿ ಕಲಸಿ ಪದೇ ಪದೆ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ.
ಕರಿಮೆಣಸಿನ ಪುಡಿಗೆ ಜೇನುತುಪ್ಪ ಸೇರಿಸಿ ದಿನಕ್ಕೆ 4 ರಿಂದ 5 ಬಾರಿ ಸ್ವಲ್ಪ ಸ್ವಲ್ಪ ಸೇವಿಸಿದರೆ ಗಂಟಲ ಕಫ ಕರಗುತ್ತದೆ.
ಸೋಂಪುಕಾಳುಗಳನ್ನು ನೀರಲ್ಲಿ ಹಾಕಿ ಕಷಾಯ ತಯಾರಿಸಿ ಆಗಾಗ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ.
ಈರುಳ್ಳಿಯನ್ನು ಕತ್ತರಿಸಿ ಅದಕ್ಕೆ ಸಕ್ಕರೆ ಬೆರೆಸಿ 30 ನಿಮಿಷ ಬಿಡಿ ನಂತರ ಅದರಿಂದ ಬಂದ ರಸವನ್ನು 2 ರಿಂದ 3 ಬಾರಿ ಸೇವಿಸಿದರೆ ಪ್ರಯೋಜನವಿದೆ.
ಎರಡು ಪಲಾವ್‌ ಎಲೆಯನ್ನು ನೀರಲ್ಲಿ ಚೆನ್ನಾಗಿ ಕುದಿಸಿ. ಆ ನೀರನ್ನು ಪದೇ ಪದೆ ಬಿಸಿ ಬಿಸಿಯಾಗಿ ಕುಡಿದರೆ ಕಫ ಕರಗುತ್ತದೆ.
ಹಸಿ ಕ್ಯಾರೆಟ್‌ಗೆ ಸ್ವಲ್ಪ ನೀರು ಸೇರಿಸಿ ಜ್ಯೂಸ್‌ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ಆಗಾಗ ಕುಡಿದರೆ ಗಂಟಲಿನ ಕಫ ನಿವಾರಣೆಯಾಗುತ್ತದೆ.