ಗಂಜಹಳ್ಳಿ ಗ್ರಾಮದಲ್ಲಿ ದದ್ದಲ್ ಪರ ಮತಯಾಚನೆ

ರಾಯಚೂರು, ಮೇ.೦೭- ಗ್ರಾಮೀಣ ಕ್ಷೇತ್ರದ ಗಂಜಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಪರ ಕಾಂಗ್ರೆಸ್ ಮುಖಂಡರು ಬಿರುಸಿನ ಪ್ರಚಾರ ನಡೆಸಿದರು. ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆ ಮನೆಗೆ ಹಂಚಿ ಮತ್ತೊಮ್ಮೆ ಬಸನಗೌಡ ದದ್ದಲ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಉಪಾಧ್ಯಕ್ಷ ಹನುಮಂತ ಲಕ್ಷ್ಮಿ, ಆಕ್ರಂಸಾಬ್, ಚಿನ್ನರೆಡ್ಡಿ, ಲಚಪ್ಪ, ಸೋಮರ ನರಸಪ್ಪ, ನರಸಿಂಹ, ರಂಗಪ್ಪ, ಸೇರಿದಂತೆ ಉಪಸ್ಥಿತರಿದ್ದರು.