
ರಾಯಚೂರು, ಮೇ.೧೧- ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಂಜಹಳ್ಳಿ ಗ್ರಾಮದಲ್ಲಿ ಮತದಾನ ಪಕ್ರಿಯೆ ಶುರುವಾದ ಬಳಿಕ ಇವಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಸುಮಾರು ಮೂರು ಗಂಟೆ ಕಾಲ ಮತದಾನ ಪಕ್ರಿಯೆಗೆ ತೊಂದರೆ ಉಂಟಾಯಿತು.
ಮತದಾನ ಪಕ್ರಿಯೆಗೆ ಸಾರದಿ ಸಾಲು ನಿಂತ
ಗ್ರಾಮದ ಮತದಾರರು ಯಂತ್ರದ ದೋಷದಿಂದ ಸಮಸ್ಯೆಗೆ ಹಿಡದರು.
ಮತದಾನ ಪಕ್ರಿಯೆ ಶುರುವಾದ ಸಂದರ್ಭದಲ್ಲಿ ಮತಗಟ್ಟೆ ಸಂಖ್ಯೆ ೨೯ ರಲ್ಲಿ ಇವಿಎಂ ಮತ್ತು ವಿ. ವಿ ಪ್ಯಾಟ್ ನಲ್ಲಿ ಯಾವುದೇ ತಾಂತ್ರಿಕ ದೋಷ ಕಂಡು ಬರದಿದ್ದರೂ ಮತಗಟ್ಟೆ ಅಧಿಕಾರಗಳು ಇವಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಉಂಟಾಗಿದೆ ಎಂದು ಹೇಳುತ್ತಿರುವುದು ಉದ್ದೇಶಪೂರ್ವಕವಾಗಿದೆ ಎಂದು ಗ್ರಾಮದ ಮತದಾರರು ಮತಗಟ್ಟೆ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಠ ಮೂರು ಭಾರಿ ಇದೆ ರೀತಿ ಯಂತ್ರದಲ್ಲಿ ದೋಷ ಕಂಡು ಬಂದ ಪರಿಣಾಮ ಮತದಾನ ಪಕ್ರಿಯೆ ಸ್ಥಗಿತಗೊಂಡಿತ್ತು. ಮತಗಟ್ಟೆ ಅಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮುಕಿ ನಡೆಯಿತು. ಮತಗಟ್ಟೆ ಸಂಖ್ಯೆ ೨೮ ರಲ್ಲಿ ತಾಂತ್ರಿಕ ದೋಷ ಕಂಡುಬಂದಿಲ್ಲ. ಆದರೆ ಮತಗಟ್ಟೆ ಸಂಖ್ಯೆ ೨೯ ರಲ್ಲಿ ಪದೇ ಪದೇ ತಾಂತ್ರಿಕ ದೋಷ ಕಂಡು ಬರುವುದು ಏಕೆ? ಎಂದು ಮತದಾರರು ಮತಗಟ್ಟೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಅಧಿಕಾರಿಗಳು ಬೇಜವಾಬ್ದಾರಿ ತನದಿಂದ ವರ್ತಿಸಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ. ಇವಿಎಂ ಯಂತ್ರದಲ್ಲಿ ದೋಷ ಕಂಡು ಬಂದ ತಕ್ಷಣವೇ ಪರಿಶೀಲನೆ ನಡೆಸಿ ನಂತರ ಯಂತ್ರ ಬದಲಾವಣೆ ಮಾಡಬೇಕು. ಆದರೆ ಮತಗಟ್ಟೆ ಅಧಿಕಾರಿಗಳ ಕಾಲಹರಣದಿಂದ
ಬೇಸತ್ತ ಮತದಾರರು ಮತಗಟ್ಟೆಯಿಂದ ಹೊರನಡೆದರು. ಮತದಾನ ಪಕ್ರಿಯೆ ಸ್ಥಗಿತಗೊಂಡ ಬಗ್ಗೆ ಸ್ಥಳೀಯರ ಮಾಹಿತಿ ಮೇರೆಗೆ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಸ್ಥಳಕ್ಕೆ ಆಗಮಿಸಿ ಅಧಿಕಾರಿ ಮತ್ತು ಸಿಬ್ಬಂದಿ ಜೊತೆ ಚರ್ಚೆಸಿದರು. ನಂತರ ಮತದಾನ ಯಂತ್ರಗಳನ್ನು ಬದಲಾವಣೆ ಮಾಡಿ ಮತದಾನ ಪಕ್ರಿಯೆ ಮುಂದುವರಿಯುತು.