ಗಂಗ್ಲಾಪುರದಲ್ಲಿ ಯುಗಾದಿ ಸಂಭ್ರಮ ಕಾರ್ಯಕ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.26: ಶ್ರೀ ಮಾತೃ ಮಹಿಳಾ ಮಂಡಳಿ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಭಾರತ ಸ್ವತಂತ್ರದ ಅಮೃತ ಮಹೋತ್ಸವ ಹಾಗೂ ಅಮೃತ ಭಾರತಿಗೆ ಕನ್ನಡದ ಆರತಿ ಸವಿ ನೆನಪು ಅಂಗವಾಗಿ ಗಡಿನಾಡು ಯುಗಾದಿ ಸಂಭ್ರಮ ಸಂಡೂರ್ ತಾಲೂಕ್ ಗಂಗ್ಲಾಪುರದಲ್ಲಿ ಆಯೋಜಿಸಲಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಿಷ್ಠಿ ರುದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಗಡಿ ಭಾಗದಲ್ಲಿ ಏನೆಲ್ಲಾ ಸಮಸ್ಯೆಗಳು ಆಗುತ್ತವೆ ಕನ್ನಡ ಭಾಷೆಯನ್ನು ಉಳಿಸಿ ಮತ್ತು ಬೆಳೆಸಿ,ಗಡಿ ನಾಡಿನ  ಜನ ಜೀವನ  ಪದ್ಧತಿಯಲ್ಲಿ ಕೊಡು  ಕೊಳ್ಳುವಿಕೆ  ಯ ಸೌಹಾರ್ಧ ಬಾವನೆ ಇರುವುದರಿಂದ  ಇಂದಿಗೂ ಕನ್ನಡ ಬಾಷೆ  ಗಟ್ಟಿಯಾಗಿ ನೆಲೆ ನಿಂತಿದೆ ನಮ್ಮ ಕನ್ನಡ ನಮ್ಮ ಹೆಮ್ಮೆ  ಎಂದು ತಿಳಿಸಿಕೊಟ್ಟರು. 
ಎಲ್ಲನಗೌಡ ಶಂಕರ್ ಅವರು ಸುಂದರವಾದ ಜಾನಪದ ಗೀತೆಯನ್ನು ಹಾಡುತ್ತಾ ಜನಕ್ಕೆ ನಮ್ಮ ಸಂಸ್ಕೃತಿ ಬಗ್ಗೆ ಮಾಹಿತಿ ಕೊಟ್ಟರು.   ಮಂಜುನಾಥ್ ಗೋವಿಂದ್ವಾಡ ಈತರ ಗಡಿ ಭಾಗದಲ್ಲಿ ಇನ್ನು ಹಲವಾರು ಕಾರ್ಯಕ್ರಮಗಳು ಯಶಸ್ವಿ ಆಗಬೇಕೆಂದು ಹೇಳಿದರು. ಮೌಲಾಲಿ ಗ್ರಾಮ ಪಂಚಾಯತ್ ಸದಸ್ಯರು ಬಸವರಾಜ್ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಗಂಗಾಪುರ, ಏರಿಸ್ವಾಮಿ ಗ್ರಾಮ ಪಂಚಾಯತಿ ಸದಸ್ಯರು, ಬೀರಪ್ಪ ನಿಂಗರಾಜು ನಾಗೇಶ್ ಶ್ರೀನಾಥ್, ತಿರುಮಲ ಜಾನಪದ ಗಾಯನ ಕಲಾವಿದ, ಕೆ ಪುಷ್ಪ ಚಂದ್ರಶೇಖರ್  ಮಂಡಳಿಯ ಅಧ್ಯಕ್ಷರು ಮಾತಾಡುತ್ತಾ ಯುಗಾದಿ ನಮ್ಮ ಹೊಸ ವರ್ಷ ಈ ಸುಸಂದರ್ಭದಲ್ಲಿ ಗಂಗಲಪುರ್ ನಿಜವಾಗಲೂ ತುಂಬಾ ಹಿಂದುಳಿದ ಪ್ರದೇಶ  ಮುಂದಿನ ದಿನಗಳಲ್ಲಿ ನಮ್ಮ ಮಂಡಳಿ ಕಡೆಯಿಂದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದರು , ಹಾಗೂ ಊರಿನ ಜನರು ಮಕ್ಕಳಲ್ಲಿ ಸಾಂಸ್ಕೃತ ಚಟುವಟಿಕೆಗಳಿಂದ ತುಂಬಾ ಬದಲಾವಣೆ ಕಾಣಬಹುದು ಆದಕಾರಣ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಈ ತರಹ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಎಂದು ಮನವಿ ಮಾಡಿದರು . ಅಕ್ಷಯ ಮತ್ತು ತಂಡ ನೃತ್ಯ ಹಾಗೂ ತೇಜಸ್ ಮತ್ತು ತಂಡ ಗಾಯನ, ರೂಪಶ್ರೀ ಅವರು ನಿರೂಪಣೆ ಮಾಡಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.