ಗಂಗೊಳ್ಳಿ: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ


ಗಂಗೊಳ್ಳಿ, ಜ.೫- ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯ ಬೋಟ್ ಯಾರ್ಡ್ ನಲ್ಲಿ ಎರಡು ದಿನಗಳ ಹಿಂದೆ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ಮೀನು ಕಾರ್ಮಿಕರೊಬ್ಬರ ಮೃತದೇಹ ಜ.೩ರಂದು ಬೆಳಗ್ಗೆ ಪತ್ತೆಯಾಗಿದೆ.
ಮೃತರನ್ನು ಜಾರ್ಖಂಡ್ ರಾಜ್ಯದ ಸಂಜಿತ್ ಡುಂಗ್ಡುಂಗ್(೩೫) ಎಂದು ಗುರುತಿಸಲಾಗಿದೆ. ಜ.೧ರಂದು ಮೀನುಗಾರಿಕೆ ಮುಗಿಸಿ ಬೋಟಿನಿಂದ ಮೀನು ಖಾಲಿ ಮಾಡಿ, ಬೋಟ್ ಯಾರ್ಡ್ ಒಳಗೆ ಹೋಗುತ್ತಿರುವಾಗ ಸಂಜಿತ್ ಆಕಸ್ಮಿಕವಾಗಿ ಕಾಲು ಜಾರಿ ಪಂಚಗಂಗಾವಳಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದರು. ಎರಡು ದಿನಗಳ ನಂತರ ಮುಳುಗಿದ ಸ್ಥಳದಲ್ಲಿಯೇ ಸಂಜಿತ್ ಮೃತದೇಹ ಪತ್ತೆಯಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.