ಗಂಗೊಲಿಯಂತೆ ಕೊಹ್ಲಿ ಕೂಡ ಆಟಗಾರರ ಬೆಂಬಲಕ್ಕೆ ನಿಲುತ್ತಾರೆ- ಫಠಾಣ್

ನವದೆಹಲಿ, ಜು ೨೧- ಟೀಂ ಇಂಡಿಯಾ  ನಾಯಕ ವಿರಾಟ್‌ ಕೊಹ್ಲಿ ಹಾಗೂ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರ ಮಧ್ಯೆ ಬಹಳ ಸಾಮತ್ಯೆ ಇದೆ ಎಂದು ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಫಠಾಣ್‌ ಹೇಳಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ನ ಕ್ರಿಕೆಟ್‌ ಕನೆಕ್ಟೆಡ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಇರ್ಫಾನ್‌ ಪಠಾಣ್‌ ಅವರು ಕೊಹ್ಲಿ ಹಾಗೂ ಗಂಗೂಲಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.  ಕೊಹ್ಲಿ ಕೂಡ  ಯುವ ಆಟಗಾರರನ್ನು ಮಾಜಿ ನಾಯಕ ಸೌರವ್‌ ಗಂಗೂಲಿ ಅವರಂತೆ ಬೆಂಬಲಿಸುವಲ್ಲಿ ಮುಂದಿದ್ದಾರೆ.

10 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿ ಆಡಿದ ನಂತರ ಬಹುತೇಕ ಆಟಗಾರರು ಕ್ರಿಕೆಟ್‌ ಲೋಕದಿಂದ ಕಳೆದುಹೋಗುತ್ತಾರೆ. ಏಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವಲ್ಲಿ ವಿಫಲರಾಗಿರುತ್ತಾರೆ. ಅಂತೆಯೇ ಕೆಲ ಆಟಗಾರರು ಕಿರಿಯರ ವಿಶ್ವಕಪ್‌ ಬಳಿಕ ಹಿರಿಯರ ತಂಡದಲ್ಲೂ ಮಿಂಚುವ ಹಾದಿ ಕಂಡುಕೊಳ್ಳುತ್ತಾರೆ. ಈ ನಡುವೆ ಒಂದು ಪ್ರಥಮದರ್ಜೆ ಕ್ರಿಕೆಟ್‌ ಎಂಬ ಸೇತುವೆ ಇದೆ,” ಎಂದು ಹೇಳಿದ್ದಾರೆ.

ಆಟಗಾರರಿಗೆ ದೊಡ್ಡ ಮಟ್ಟದಲ್ಲಿ ಆಡುವ ಮನಸ್ಥಿತಿ ಅಭಿವೃದ್ಧಿ ಆಗುವಂತೆ ನಾವು ಎಚ್ಚರಿಕೆ ವಹಿಸಬೇಕು. ಜೊತೆಗೆ ಅವರ ಆಟ ಕೂಡ ದೊಟ್ಟ ಮಟ್ಟದಲ್ಲಿ ಆಡಲು ಸೂಕ್ತವಾಗಿರುವಂತೆ ನೋಡಿಕೊಳ್ಳಬೇಕು. ಕಿರಿಯರ ವಿಶ್ವಕಪ್‌ ಆಡಿದ ಆಟಗಾರರ ಮೇಲಿರುವ ಜವಾಬ್ದಾರಿ ಇದೆ ಆಗಿದೆ,” ಎಂದು ಇರ್ಫಾನ್‌ ತಿಳಿಸಿದ್ದಾರೆ.