ಗಂಗಾ-ಕಾವೇರಿ ನದಿಗಳ ಜೋಡಣೆಗೆ ಒತ್ತಾಯಿಸಿ ಕಾಲ್ನಡಿಗೆಯಲ್ಲೇ ತಿರುಪತಿಗೆ ಹೊರಟ ದಂಪತಿ!

ಮೈಸೂರು, ನ.18: ಗಂಗಾ -ಕಾವೇರಿ ನದಿಗಳ ಜೋಡಣೆ ಮಾಡುವಂತೆ ಒತ್ತಾಯಿಸಿ ದಂಪತಿ ಕಾಲ್ನಡಿಗೆಯಲ್ಲೇ ತಿರುಪತಿಗೆ ಪ್ರಯಾಣ ಕೈಗೊಂಡಿದೆ.
ಹೀಗೆ ಕಾಲ್ನಡಿಗೆಯಲ್ಲಿ ತಿರುಪತಿಗೆ ಪ್ರಯಾಣ ಕೈಗೊಂಡವರು ಬೇರಾರೂ ಅಲ್ಲ. ಮೈಸೂರು ಜಿಲ್ಲಾ ನಗರ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಮಂಜುನಾಥ್. ನದಿಗಳ ಜೋಡಣೆ ಮಾಡಿದರೆ ರೈತರಿಗೆ ಬಹಳ ಉಪಯೋಗವಾಗಲಿದೆ. ದೇಶದ ಜನರ ಹಿತದೃಷ್ಟಿಯಿಂದ ಈ ಕೂಡಲೇ ನದಿಗಳ ಜೋಡಣೆ ಯೋಜನೆ ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು. ಕಳೆದ 27 ವರ್ಷಗಳಿಂದಲೂ ಅವರು ಪಾದಯಾತ್ರೆ ಕೈಗೊಳ್ಳುತ್ತಿದ್ದು, ಇಂದು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ದಂಪತಿ ತಿರುಪತಿಗೆ ಕಾಲ್ನಡಿಗೆಯಲ್ಲಿಯೇ ತೆರಳಿದರು. ಈ ಸಂದರ್ಭ ಮಾತನಾಡಿದ ಅವರು ಉತ್ತರದ ಗಂಗಾ ನದಿ, ದಕ್ಷಿಣದ ಕಾವೇರಿ ನದಿಯನ್ನು ಜೋಡಿಸಿದರೆ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ. ನದಿಗಳ ಜೋಡಣೆಯಿಂದ ರೈತರಿಗೆ ಬಹಳ ಉಪಯೋಗವಾಗಲಿದೆ. ದೇಶದ ಜನರ ಹಿತದೃಷ್ಟಿಯಿಂದ ಈ ಕೂಡಲೇ ನದಿಗಳ ಜೋಡಣೆ ಯೋಜನೆ ಪ್ರಾರಂಭಿಸಬೇಕಿದೆ. ಜನರು ಕೋವಿಡ್ ನಿಂದ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅ.2 ರ ಗಾಂಧಿ ಜಯಂತಿಯಂದು ದೇವರ ಬಳಿ ಪಾದಯಾತ್ರೆ ಮಾಡುವುದಾಗಿ ಸಂಕಲ್ಪ ಹೊತ್ತಿದ್ದೆ. ಇಂದು ಮೈಸೂರಿನಿಂದ ತಿರುಪತಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.