ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಉಚಿತವಾಗಿ ಮೋಟಾರ್ ವಿತರಣೆ


 ಸಂಜೆವಾಣಿ ವಾರ್ತೆ 
 ಹಗರಿಬೊಮ್ಮನಹಳ್ಳಿ.ಜು.22 ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಗುರುವಾರ ಬಂಜಾರ  ಅಭಿವೃದ್ಧಿ ನಿಗಮ, ಹಾಗೂ ದೇವರಾಜ್ ಅರಸು ಅಭಿವೃದ್ಧಿ ನಿಗಮದಿಂದ ಆಯ್ಕೆಯಾದ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಶಾಸಕ ಎಸ್. ಭೀಮನಾಯ್ಕ್ ಮೋಟಾರ್, ಪೈಪ್ ಉಚಿತವಾಗಿ ವಿತರಿಸಿದರು.
 ನಂತರ ಮಾತನಾಡಿ ಸರ್ಕಾರದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ ಬೋರ್ ವೆಲ್ ಗಳಿಗೆ ಉಚಿತವಾಗಿ ಮೋಟಾರ್ ಮತ್ತು ಪೈಪ್ ನೀಡುತ್ತಿರುವುದನ್ನು ರೈತರು ಸದುಪಯೋಗ  ಮಾಡಿಕೊಳ್ಳಬೇಕು. ಬಂಜಾರ ಸಮುದಾಯ ಮೊದಲಿನಿಂದಲೂ  ವಲಸೆ ಹೋಗುವುದು ರೂಢಿಯಾಗಿ ಬಿಟ್ಟಿದೆ. ಇದನ್ನು ತಪ್ಪಿಸಲು ಸರ್ಕಾರ ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಪಟ್ಟಣದಲ್ಲಿ 2 ಕೋಟಿ ಅಂದಾಜು ಮೊತ್ತದಲ್ಲಿ ಕಸೂತಿ  ಕೇಂದ್ರ ಆರಂಭಿಸಲಾಗುವುದು. ನಮ್ಮ ಅಧಿಕಾರ ಅವಧಿಯಲ್ಲಿ ತಾಲೂಕಿನ 19 ತಾಂಡಗಳಲ್ಲಿ ತಲಾ 10 ಲಕ್ಷ ರೂಪಾಯಿ ಮೊತ್ತದ  ಸಾಂಸ್ಕೃತಿಕ ಭವನ, ರಸ್ತೆ ಚರಂಡಿ ಸೇರಿ  ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.
 ಈ ಸಂದರ್ಭದಲ್ಲಿ ಮೈಲಾರಪ್ಪ ಮುಟ್ಗನಹಳ್ಳಿ ಕೊಟ್ರೇಶ್ ಜಂದಿ  ಸಾಬ್, ಕುಬೇರಪ್ಪ ಮೂಗಪ್ಪ ಹುಲಗಪ್ಪ, ಪತ್ರೇಶ್ ಹಿರೇಮಠ್ ಇತರರಿದ್ದರು.        

Attachments area