ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಸೀಮಂತ


ಗಂಗಾವತಿ: ಗರ್ಭಿಣಿ ಸಂದರ್ಭದಲ್ಲಿ ಎಚ್ಚರಿಕೆ ಕ್ರಮಗಳು, ಆಹಾರ, ಶಿಶುವಿನ ಬೆಳವಣಿಗೆ ಗಮನಿಸುವ ಬಗ್ಗೆ ಸಲಹೆ ಸೂಚನೆ ನೀಡಲು ಗರ್ಭಿಣಿಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೀಮಂತ ಮಾಡಿ ಅವರಿಗೆ ಮಾರ್ಗದರ್ಶನ ನೀಡುತ್ತಿರುವುದು ಶ್ಗಾಘನೀಯ ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ  ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೊಪ್ಪಳ ಹಾಗೂ ಉಪವಿಭಾಗ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಸೀಮಂತದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತಾಯಿ ಮತ್ತು ಶಿಶು ಮರಣದ ಪ್ರಮಾಣವನ್ನು ತಪ್ಪಿಸಲು ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಸುರಕ್ಷಾ ಮಾತೃ ಅಭಿಯಾನ’ ನಡೆಸುತ್ತಿದೆ. ಯೋಜನೆಯ ಪ್ರಯೋಜನೆಯನ್ನು ಪ್ರತಿ ಗರ್ಭಿಣಿ ಮಹಿಳೆಯರು ಪಡೆಯಬೇಕು. ಸೀಮಂತ ಕಾರ್ಯಕ್ರಮ ಗರ್ಭಿಣಿಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಆಗಾಗ್ಗೆ ವೈದ್ಯರ ಸಲಹೆ ಪಡೆದು, ಮಾರ್ಗದರ್ಶನವನ್ನು ಪಾಲನೆ ಮಾಡಿದರೆ ತಾಯಿ ಹಾಗೂ ಜನಿಸುವ ಮಗು ಆರೋಗ್ಯ ವಾಗಿರುತ್ತದೆ. ಬಿಪಿ, ಶುಗರ್ ಇತರ ಸೋಂಕು ತಡೆಯಲು ವೈದ್ಯರ ಸಲಹೆಯಂತೆ ಔಷಧಿ ತೆಗೆದುಕೊಂಡರೆ ಸುರಕ್ಷಿತ ಹೆರಿಗೆಗೆ ಅನುಕೂಲವಾಗುತ್ತದೆ. ಉಚಿತವಾಗಿ ಎಲ್ಲಾ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಇದರಿಂದ ತಾಯಿ ಮತ್ತು ಶಿಶುವಿನ ಮರಣದ ಪ್ರಮಾಣ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಈ ವೇಳೆ 250 ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ಈ ಸಂರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿಗಳಾದ  ಡಾ. ಈಶ್ವರ ಶಿ ಸವಡಿ, ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ಗೌರಿಶಂಕರ್, ಡಾ.ನಂದಕುಮಾರ, ಡಾ. ರವೀಂದ್ರನಾಥ, ಡಾ.ಪ್ರಕಾಶ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶಶಿಧರ್, ಆರೋಗ್ಯ ರಕ್ಷಾ ಸಾಮಾನ್ಯ ಸಮಿತಿ ಸದಸ್ಯರಾದ ಶ್ರೀಧರ ಕಲ್ಮನಿ, ಮಂಜುನಾಥ ಕೋಲ್ಕರ್, ಟಿ.ಜಿ.ಬಾಬು, ರವಿಕುಮಾರ್ ಯಲಬುರ್ತಿ, ಎ.ಭಾರತಿ ಕೃಷ್ಣ, ಶಿವಕುಮಾರ್ ಉಪ್ಪರ, ಹನುಮಂತ ಮೊಳೆ, ಮಹಮದ್ ಆಸೀಫ್, ಆರೋಗ್ಯ ಸಿಬ್ಬಂದಿಗಳಾದ ಕಿರಣ,ಪಲ್ಲವಿ ದೇಸಾಯಿ, ಶಿವಾನಂದ ನಾಯ್ಕರ್,ಹಾಗೂ ಆಶಾ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.