ಗಂಗಾವತಿ: ವೀಕೆಂಡ್ ಕರ್ಫ್ಯೂ ಯಶಸ್ವಿ

ಗಂಗಾವತಿ ಎ.26: ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ಪೌರಾಯುಕ್ತ ಅರವಿಂದ ಬಿ. ಜಮಖಂಡಿ ನೇತೃತ್ವದಲ್ಲಿ ನಗರಸಭೆಯ ನೈರ್ಮಲ್ಯ ವಿಭಾಗದ ಆರೋಗ್ಯ ನಿರೀಕ್ಷಕರು ಮತ್ತು ಕಚೇರಿ ಸಿಬ್ಬಂದಿ ಗಳೊಂದಿಗೆ ನಗರದ ಪ್ರಮುಖ ವೃತ್ತಗಳು, ರಸ್ತೆಗಳು ಮತ್ತು ಏರಿಯಾಗಳಿಗೆ ತೆರಳಿ ಅಲ್ಲಲ್ಲಿ ತೆರದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು.
ಮನೆಯಿಂದ ಹೊರಗಡೆ ಬಾರದಂತೆ ಎಚ್ಚರಿಕೆ ನೀಡಿದರು. ಒಂದು ವೇಳೆ ಅಗತ್ಯವಿದ್ದಲ್ಲಿ ಮಾತ್ರ ಮಾಸ್ಕ ಧರಿಸಿಕೊಂಡು ಹೊರಗಡೆ ಬರುವಂತೆ ಮೈಕ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿದರು. ಅಲ್ಲದೇ ಅನಾವಶ್ಯಕವಾಗಿ ಮತ್ತು ಮಾಸ್ಕ ಧರಿಸದೇ ಇರುವವರಿಗೆ ರಸ್ತೆಯಲ್ಲಿ ಓಡಾಡುವರಿಗೆ ದಂಡವನ್ನು ವಿಧಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ದತ್ತಾತ್ರೇಯ ಹೆಗ್ಗಡೆ, ಕಿ.ಆ.ನಿರೀಕ್ಷಕ ಎ. ನಾಗರಾಜ ಮತ್ತು ನಗರಸಭೆಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ಇದ್ದರು.