ಗಂಗಾವತಿ ನಗರ ಗಬ್ಬು ನಾರುತ್ತಿದ್ದು, ಪೌರಾಯುಕ್ತರ ಅಮಾನತ್ತಿಗೆ ಆಗ್ರಹ

ಸಂಜೆವಾಣಿ ವಾರ್ತೆ
ಗಂಗಾವತಿ ಸೆ 29: ಗಂಗಾವತಿ ನಗರ ಕಳೆದ ಒಂದು ತಿಂಗಳಿನಿಂದ ಡೆಂಘ್ಯೂ ಮಾರಕ ರೋಗದಿಂದ ತತ್ತರಿಸಿ ಹೋಗುತ್ತಿದೆ. ಗಂಗಾವತಿಯ ಪೌರಾಯುಕ್ತರಾದ ಅರವಿಂದ ಜಮಖಂಡಿಯವರು ಡೆಂಘ್ಯೂ
ಸೊಳ್ಳೆಗಳನ್ನು ನಿಯಂತ್ರಿಸಲು ಯಾವುದೇ ಕ್ರಮ ಜರುಗಿಸಿರುವುದಿಲ್ಲ. ನೂರಾರು ಜನ ದವಾಖಾನೆ ಸೇರಲು ಪೌರಾಯುಕ್ತರೇ ನೇರ ಕಾರಣರಾಗಿದ್ದಾರೆ. ಕೂಡಲೇ ಇವರನ್ನು ಅಮಾನತ್ತುಗೊ
ಳಿಸಬೇಕೆಂದು ಸಿಪಿಐಎಂಎಲ್ ಲಿಬರೇಷನ್ ಪಕ್ಷ ಸರ್ಕಾರವನ್ನು ಒತ್ತಾಯಿಸುತ್ತಿದೆ.
ಪೌರಕಾರ್ಮಿಕರಿಗೆ ರಕ್ಷಣಾ ಉಪಕರಣಗಳನ್ನು ಕೊಡದೇ ಬರೀ ಕೈ-ಕಾಲುಗಳಿಂದ ಕೆಲಸ ಮಾಡಿಸುತ್ತಿರುವುದರಿಂದ 150 ಜನ ಪೌರಕಾರ್ಮಿಕರು ಅಭದ್ರತೆ, ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ. ಗಂಗಾವತಿಯ ರಸ್ತೆಗಳಂತೂ ವಾಹನಗಳು, ಜನರು ತಿರುಗಾಡಲು ಆಗುತ್ತಿಲ್ಲ. ಇವರು ಕಮರ್ಷಿಯಲ್ (ದುಡ್ಡಿಗಾಗಿ) ಅತಿಕ್ರಮಗಳನ್ನು ತೆರವು ಮಾಡುವುದು,
ಫುಟ್‍ಪಾತ್ ವ್ಯಾಪಾರಿಗಳಿಗೆ ತೊಂದರೆಕೊಡುವುದನ್ನೇ ಕೆಲಸವಾಗಿಟ್ಟುಕೊಂಡಿದ್ದಾರೆ. ಡೆಂಘ್ಯೂ ಜ್ವರ ನಿಯಂತ್ರಿಸಲು ಯಾವುದೇ ಔಷಧಿಗಳನ್ನು ಸಿಂಪಡಿಸುತ್ತಿಲ್ಲ. ಇದರಿಂದಾಗಿ ಗಂಗಾವತಿಯ ಆಸ್ಪತ್ರೆಗಳು ಡೆಂಘ್ಯೂ ಕೇಸ್‍ಗಳಿಂದ ತುಂಬಿವೆ.
ಕೂಡಲೇ ಪೌರಾಯುಕ್ತ ಅರವಿಂದ ಜಮಖಂಡಿ ಇವರನ್ನು ಅಮಾನತ್ತು ಮತ್ತು ವರ್ಗಾವಣೆ ಮಾಡದಿದ್ದಲ್ಲಿ ಗಂಗಾವತಿ ನಾಗರಿಕರಿಗೆ ಉಳಿಗಾಲವಿಲ್ಲ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.