ಗಂಗಾವತಿ ನಗರಸಭೆ ಚುನಾವಣೆಗೆ ಕಾಂಗ್ರೆಸ್ , ಬಿಜೆಪಿ ಯಿಂದ ನಾಮಪತ್ರ ಸಲ್ಲಿಕೆ.

ಗ‌ಂಗಾವತಿ ನ 02 : ರಾಜ್ಯದ ಗಮನ ಸೆಳೆದಿದ್ದ ಗಂಗಾವತಿ ನಗರಸಭೆ ಅಧ್ಯಕ್, ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ನಡೆಯುತ್ತಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಪಕ್ಷದಿಂದ ನಾಮಪತ್ರ ಸಲ್ಲಿಸಲಾಗಿದೆ.

ಬಿಜೆಪಿಯ ನಗರಸಭೆ ಸದಸ್ಯೆ ಜಯಶ್ರೀ ಸಿದ್ದಾಪುರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ನ 30ನೇ ವಾರ್ಡಿನ್ ಸದಸ್ಯೆ ಮಾಲಾಶ್ರೀ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

ಎರಡು ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಸಿದ್ದು, ಬಿಜೆಪಿಯ ಹೀರಾಬಾಯಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸುಧಾ ಸೋಮನಾಥ ಅವರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ಬೀಗಿ ಭದ್ರತೆ: ನಗರಸಭೆ ಅಧಿಕಾರ ಪಡೆಯಲು ಎರಡು ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಹೀಗಾಗಿ ನಗರಸಭೆ ಸದಸ್ಯರು ಪೊಲೀಸ್ ಭದ್ರತೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಸದಸ್ಯರಾದ ಉಮೇಶ ಸಿಂಗನಾಳ, ರಮೇಶ ಚೌಡ್ಕಿ, ನವೀನ್ ಕುಮಾರ್, ಮಡ್ಡೇರ್ ಪರಶುರಾಮ, ಜಯಶ್ರೀ ಸಿದ್ದಾಪುರ, ಹಾಗೂ ಜೆಡಿಎಸ್ ನ ನಗರಸಭೆ ಸದಸ್ಯ ಅಬ್ದುಲ್ ಬಿಚುಗತ್ತಿ ನಾಮಪತ್ರ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು.

ಕಾಂಗ್ರೆಸ್ ನ ಸದಸ್ಯರಾದ
ಶ್ಯಾಮೀದ್ ಮನಿಯಾರ್, ಕಾಶೀಂಸಾಬ್ ಗದ್ವಾಲ್, ಮನೋಹರ ಸ್ವಾಮಿ ಹಿರೇಮಠ, ರಾಜ್ ಮಹ್ಮದ್, ಜೆಡಿಎಸ್ ನ ಸದಸ್ಯ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರು.
ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ 144 ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.