ಗಂಗಾವತಿ ನಗರಸಭೆ ಕಾಂಗ್ರೆಸ್ ವಶ ಮಾಲಾಶ್ರೀ ಅಧ್ಯಕ್ಷೆ, ಸುಧಾ ಉಪಾಧ್ಯಕ್ಷೆ

ಗಂಗಾವತಿ ನ.3: ರಾಜ್ಯ ಹಾಗೂ ರಾಜಕೀಯದಲ್ಲಿ ಭಾರಿ ಕೂತೂಹಲು ಮೂಡಿಸಿದ್ದ ಗಂಗಾವತಿ ನಗರಸಭೆ ಚುನಾವಣೆಯಲ್ಲಿ ಬಹು ನಿರೀಕ್ಷೆಯಂತೆ ನಗರಸಭೆ ಆಡಳಿತ ಕಾಂಗ್ರೆಸ್ ಪಾಲಾಯಿತು.
ಸ್ಥಳೀಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾಲಾಶ್ರೀ ಸಂದೀಪ್ ಹಾಗೂ ಸುಧಾ ಸೋಮನಾಥ ಆಯ್ಕೆಯಾದರು.
35 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ 17 ಸ್ಥಾನ ಗಳಿಸಿತ್ತು. ಒಂದು ಬಿಜೆಪಿ ಹಾಗೂ ಒಬ್ಬ ಜೆಡಿಎಸ್ ಸದಸ್ಯರ ಸೇರಿಸಿದರೆ ಬಹುತದ 19 ಸದಸ್ಯರ ಬೆಂಬಲ ಕಾಂಗ್ರೆಸ್ ಗೆ ಇತ್ತು. ಈಗಾಗಿ ಕಾಂಗ್ರೆಸ್ ಸದಸ್ಯರು ಅಧಿಕಾರ ಪಡೆದರು.
ಚುನಾವಣೆ ಆಯ್ಕೆಯಲ್ಲಿ ಬಿಜೆಪಿ ಸದಸ್ಯೆ ಸುಧಾ ಸೋಮನಾಥ ಹಾಗೂ ಜೆಡಿಎಸ್‍ನ ಅಬ್ದುಲ್ ಬಿಚ್ಚುಗತ್ತಿ ಪ್ರಮುಖ ನಿರ್ಣಾಯಕರಾಗಿದ್ದರು. ಅಂತಿಮವಾಗಿ ಬಿಜೆಪಿ ಸದಸ್ಯೆ ಸುಧಾ ಹಾಗೂ ಜೆಡಿಎಸ್‍ನ ಅಬ್ದುಲ್ ಬಿಚ್ಚುಗತ್ತಿ ಅವರ ಬೆಂಬಲ ಗಳಿಸುವ ಮೂಲಕ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಏರಿತು.
31ನೇ ವಾರ್ಡಿನ ಕಾಂಗ್ರೆಸ್‍ನ ನಗರಸಭೆ ಸದಸ್ಯೆ ಮಾಲಾಶ್ರೀ ಸಂದೀಪ ಅಧ್ಯಕ್ಷರಾಗಿ ಆಯ್ಕೆಯಾದರೇ, 26ನೇ ವಾರ್ಡಿನ ಬಿಜೆಪಿ ಸದಸ್ಯೆ ಸುಧಾ ಸೋಮನಾಥ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಸೇರ್ಪಡೆಯಾಗಿ 20 ಸದಸ್ಯರ ಮತ ಗಳಿಸಿ ಉಪಾಧ್ಯಕ್ಷರಾಗಿ ಚುನಾಯಿತರಾದರು.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಪಕ್ಷದ ಜಯಶ್ರೀ ಸಿದ್ದಾಪುರ ಅವರಿಗೆ 18 ಮತ ಪಡೆದರೇ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಹೀರಾಬಾಯಿ ಅವರು ಪರ 17 ಮತ ಪಡೆದು ಪರಾಭಗೊಂಡರು.
ಈ ಅನ್ವಯ ಗಂಗಾವತಿ ನಗರಸಭೆ ಅಧ್ಯಕ್ಷರಾಗಿ ಮಾಲಾಶ್ರೀ ಹಾಗೂ ಉಪಾಧ್ಯಕ್ಷರಾಗಿ ಸುಧಾ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ ಘೋಷಣೆ ಮಾಡಿದರು.
ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಭಾರೀ ಪೈಪೋಟಿ ನಡೆಸಿದ್ದರು. ಅಲ್ಲದೇ, ಈ ಚುನಾವಣೆಯು ರಾಜ್ಯದ ಮಟ್ಟದಲ್ಲಿ ವಿಶೇಷ ಗಮನ ಸೆಳೆದಿತ್ತು. ಒಟ್ಟಾರೆ 10 ವರ್ಷದಿಂದ ನಗರಸಭೆಯಲ್ಲಿ ತಮ್ಮ ಸದಸ್ಯರೊಂದಿಗೆ ಅಧಿಕಾರ ನಡೆಸಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು. ಮತ್ತೊಮ್ಮೆ ಅಧಿಕಾರವನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವುದು ವಿಶೇಷ.
ಚುನಾವಣೆ ಶಾಂತಿಯುತ್ತ ನಡೆದಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಅಡ್ಡ ಮತದಾನ ಹಾಗೂ ಪಕ್ಷದ ವಿರೋಧ ಚಟುವಟಿಕೆ ಮಾಡಿದ ನಮ್ಮ ಪಕ್ಷದ ನಗರಸಭೆ ಸದಸ್ಯೆ ಸುಧಾ ಸೋಮನಾಥ ಅವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದು ತಿಂಗಳಲ್ಲಿ ಸುಧಾ ಅವರನ್ನು ಪಕ್ಷದಿಂದ ಅನರ್ಹಗೊಳಿಸಲಾಗುವುದು. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ನಮ್ಮ ಪಕ್ಷಕ್ಕೆ ಯಾವುದೇ ಹಿನ್ನಡೆ ಆಗಿಲ್ಲ.
ಪರಣ್ಣ ಮುನವಳ್ಳಿ, ಶಾಸಕರು


ಗಂಗಾವತಿ ನಗರಸಭೆ ಕಾಂಗ್ರೆಸ್ ವಶಕ್ಕೆ ಬಂದಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿವೆ. ್ಲ ಸ್ವಚ್ಛತೆ, ಸಮರ್ಪಕ ಕುಡಿಯುವ ನೀರಿಗೆ ಆದ್ಯತೆ ಹಾಗೂ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು.
-ಶ್ಯಾಮೀದ್ ಮುನಿಯಾರ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ,


ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಹಾಗೂ ಪಕ್ಷದ ಹಿರಿಯ ಮುಖಂಡರ ಆಶೀರ್ವಾದಿಂದ ಅಧ್ಯಕ್ಷ ಸ್ಥಾನ ದೊರೆತ್ತಿದೆ. ನಗರದ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುತ್ತಿವೆ.

  • ಮಾಲಾಶ್ರೀ, ನೂತನ ಅಧ್ಯಕ್ಷೆ, ನಗರಸಭೆ