ಗಂಗಾವತಿ ನಗರಸಭೆ ಕಾಂಗ್ರೆಸ್ ವಶ :ಮಾಲಾಶ್ರೀ ಅಧ್ಯಕ್ಷೆ, ಸುಧಾ ಉಪಾಧ್ಯಕ್ಷೆ

ಗಂಗಾವತಿ ನ.2 : ಬಹು ನಿರೀಕ್ಷೆಯಂತೆ ನಗರಸಭೆ ಆಡಳಿತ ಕಾಂಗ್ರೆಸ್ ಪಾಲಾಯಿತು.
ಸ್ಥಳೀಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾಲಾಶ್ರೀ ಸಂದೀಪ್ ಹಾಗೂ ಸುಧಾ ಸೋಮನಾಥ ಆಯ್ಕೆಯಾದರು.

೩೫ ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ ೧೭ ಸ್ಥಾನ ಗಳಿಸಿತ್ತು. ಒಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಸೇರಿಸಿದರೆ ಬಹುತದ ೧೯ ಸದಸ್ಯರ ಬೆಂಬಲ ಕಾಂಗ್ರೆಸ್ ಗೆ ಇತ್ತು. ಈಗಾಗಿ ಕಾಂಗ್ರೆಸ್ ಸದಸ್ಯರು ಅಧಿಕಾರ ಪಡೆದರು.
ಚುನಾವಣೆ ಆಯ್ಕೆಯಲ್ಲಿ ಬಿಜೆಪಿ ಸದಸ್ಯೆ ಸುಧಾ ಸೋಮನಾಥ ಹಾಗೂ ಜೆಡಿಎಸ್‌ನ ಅಬ್ದುಲ್ ಬಿಚ್ಚುಗತ್ತಿ ಪ್ರಮುಖ ನಿರ್ಣಾಯಕರಾಗಿದ್ದರು. ಅಂತಿಮವಾಗಿ ಬಿಜೆಪಿ ಸದಸ್ಯೆ ಸುಧಾ ಹಾಗೂ ಜೆಡಿಎಸ್‌ನ ಅಬ್ದುಲ್ ಬಿಚ್ಚುಗತ್ತಿ ಅವರ ಬೆಂಬಲ ಗಳಿಸುವ ಮೂಲಕ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಏರಿತು.
ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಭಾರೀ ಪೈಪೋಟಿ ನಡೆಸಿದ್ದರು. ಅಲ್ಲದೇ, ಈ ಚುನಾವಣೆಯು ರಾಜ್ಯದ ಮಟ್ಟದಲ್ಲಿ ವಿಶೇಷ ಗಮನ ಸೆಳೆದಿತ್ತು.
ಚುನಾವಣೆ ಶಾಂತಿಯುತ್ತ ನಡೆದಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಅಡ್ಡ ಮತದಾನ ಹಾಗೂ ಪಕ್ಷದ ವಿರೋಧ ಚಟುವಟಿಕೆ ಮಾಡಿದ ನಮ್ಮ ಪಕ್ಷದ ನಗರಸಭೆ ಸದಸ್ಯೆ ಸುಧಾ ಸೋಮನಾಥ ಅವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದು ತಿಂಗಳಲ್ಲಿ ಸುಧಾ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದದು. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ನಮ್ಮ ಪಕ್ಷಕ್ಕೆ ಯಾವುದೇ ಹಿನ್ನಡೆ ಆಗಿಲ್ಲ.

ಪರಣ್ಣ ಮುನವಳ್ಳಿ, ಶಾಸಕರು

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾಗಿದ್ದವು. ಬಿಜೆಪಿಯ ಜಯಶ್ರೀ ಸಿದ್ದಾಪುರ ಅವರಿಗೆ ೧೮ ಮತ ಚಲಾವಣೆಯಾದರೆ, ಕಾಂಗ್ರೆಸ್‌ನ ಮಾಲಾಶ್ರೀ ಅವರ ಪರವಾಗಿ ೧೯ ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಹೀರಾಬಾಯಿ ಅವರ ಪರ ೧೭ ಮತ ಚಲಾವಣೆ ಆದರೆ, ಕಾಂಗ್ರೆಸ್ ನ ಸುಧಾ ಸೋಮನಾಥ ಅವರ ಪರ ೨೦ ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಈ ಅನ್ವಯ ಗಂಗಾವತಿ ನಗರಸಭೆ ಅಧ್ಯಕ್ಷರಾಗಿ ಮಾಲಾಶ್ರೀ ಹಾಗೂ ಉಪಾಧ್ಯಕ್ಷರಾಗಿ ಸುಧಾ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ ಘೋಷಣೆ ಮಾಡಿದರು.


ಗಂಗಾವತಿ ನಗರಸಭೆ ಕಾಂಗ್ರೆಸ್ ವಶಕ್ಕೆ ಬಂದಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿವೆ. ಅಧ್ಯಕ್ಷೆ ಮಾಲಾಶ್ರೀ, ಉಪಾಧ್ಯಕ್ಷೆ ಸುಧಾ ಆಯ್ಕೆಯಾಗಿದ್ದು, ನಗರದಲ್ಲಿ ಸ್ವಚ್ಛತೆ, ಸಮರ್ಪಕ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತವೆ.

  • ಶ್ಯಾಮೀದ್ ಮುನಿಯಾರ್ , ನಗರಸಭೆ ಸದಸ್ಯ, ನಗರದ ಘಟಕದ ಅಧ್ಯಕ್ಷ,


ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಹಾಗೂ ಪಕ್ಷದ ಹಿರಿಯ ಮುಖಂಡರ ಆಶೀರ್ವಾದಿಂದ ಅಧ್ಯಕ್ಷ ಸ್ಥಾನ ದೊರೆತ್ತಿದೆ. ನಗರದ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಿವೆ.

  • ಮಾಲಾಶ್ರೀ, ನೂತನ ಅಧ್ಯಕ್ಷೆ,