ಗಂಗಾವತಿ ನಗರದಲ್ಲಿ ರಾಜಶೇಖರ ಅಂಗಡಿ ಬಿರುಸಿನ ಪ್ರಚಾರ

ಸಂಜೆವಾಣಿ ವಾರ್ತೆ
ಗಂಗಾವತಿ:ನ.17- ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರನ್ನು ಗೌರವಿಸುವುದ ರೊಂದಿಗೆ ಕನ್ನಡದ ನೆಲ, ಜಲ, ಭಾಷೆಯ ರಕ್ಷಕನಾಗಿ ಪ್ರಾಮಾಣಿಕ ವಾಗಿ ನುಡಿ ಸೇವೆ ಮಾಡುವೆ.
ಕೊಪ್ಪಳ ಜಿಲ್ಲೆ ಯಾದಾಗಿನಿಂದ 6 ಬಾರಿ ಬೇರೆ ತಾಲ್ಲೂಕಿ ನವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಬಾರಿ ಗಂಗಾವತಿ ತಾಲ್ಲೂಕಿಗೆ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಸರ್ವಾನುಮತದಿಂದ ಪ್ರಜಾಪ್ರಭುತ್ವದ ನೆಲೆಯಲ್ಲಿ ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಹಿರಿಯ ಕಿರಿಯ ಸಾಹಿತಿಗಳ ಒಡನಾಟ, ಮಾರ್ಗ ದರ್ಶನವಿದೆ. ಸಂಘಟನಾ ಶಕ್ತಿಯ ಆಧಾರದ ಮೇಲೆ ನಮ್ಮ ಹಿರಿಯರು ನನ್ನನ್ನು ಆಯ್ಕೆ ಮಾಡಿದ್ದಾರೆ. ಹಿರಿಯರ, ಸಮಸ್ತ ಕಸಾಪ ಆಜೀವ ಸದಸ್ಯರ ಆಶೀರ್ವಾದವಿದೆ. ಹೋದಕಡೆಗಳಲ್ಲಿ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ನನಗೆ ನುಡಿ ಸೇವೆ ಮಾಡಲು ಅವಕಾಶ ನೀಡಿ. 106 ವರ್ಷಗಳ ಕಸಾಪ ಇತಿಹಾಸದಲ್ಲಿ ಈ ಭಾಗದವರು ರಾಜ್ಯಾಧ್ಯಕ್ಷರಾಗಿಲ್ಲ. ಅದೇ ರೀತಿ ಕನ್ನಡದ ಪ್ರಾಮಾಣಿಕ ಕಳಕಳಿಯ ಹೃದಯ ಶ್ರೀಮಂತಿಕೆಯ ನಮ್ಮ ವರೇ ಆದ ಶೇಖರಗೌಡರಿಗೆ ದಾಖಲೆಯ ಮತ ನೀಡಿ ಸ್ಥಳೀಯ ಅಭ್ಯರ್ಥಿಗಳನ್ನು ಬೆಂಬಲಿಸಬೇಕು” ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಶರಣೇಗೌಡ ಪೆÇೀಲೀಸ್ ಪಾಟೀಲ್ ಕಸಾಪ ಆಜೀವ ಸದಸ್ಯರಲ್ಲಿ ಮನವಿ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡುತ್ತ “ನನ್ನ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಕಸಾಪ ಘಟಕಗಳು ಉತ್ತಮ ಕಾರ್ಯ ಮಾಡಿ ಸಾಹಿತ್ಯಾ ಸಕ್ತರ ಗಮನ ಸೆಳೆದಿವೆ. ಈ ಬಾರಿ ಇನ್ನೂ ಹೆಚ್ಚು ಕಾರ್ಯಕ್ರಮಗಳ ಮೂಲಕ ನುಡಿ ಸೇವೆ ಮಾಡುತ್ತೇವೆ” ಎಂದರು.
ಹಿರಿಯ ಸಾಹಿತಿಗಳಾದ ಶ್ರೀಮತಿ ರುದ್ರಮ್ಮ ಹಾಸಿನಾಳ ಅವರ ಮನೆಗೆ ಭೇಟಿ ನೀಡಿ ಮತ ಯಾಚಿಸಿ ಮಾತನಾಡುತ್ತಿದ್ದರು. ಅವರು ನಗರದ ಶಿಕ್ಷಕರ ಕಾಲೋನಿ, ಜಯನಗರ, ಹಿರೇಜಂತಕಲ್, ಇಸ್ಲಾಂಪುರ, ಗಂಜ್ ಏರಿಯಾಗಳಲ್ಲಿ ಆಜೀವ ಸದಸ್ಯರ ಮನೆಮನೆಗೆ ತೆರಳಿ ಮತಯಾಚಿ ಸಿದರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಅಭ್ಯರ್ಥಿ ಶರಣೇಗೌಡ ಪೆÇೀ. ಪಾಟೀಲ್, ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ನೇತೃತ್ವದ ತಂಡ ಭರ್ಜರಿ ಪ್ರಚಾರ ನಡೆಸಿತು. ಎಲ್ಲಾ ಕಡೆ ಆಜೀವ ಸದಸ್ಯರ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಕಸಾಪ ಹಿರಿಯ ಸದಸ್ಯ ರಾದ ಅಕ್ಕಿ ಚಂದ್ರಶೇಖರ, ಮಸ್ಕಿ ಮಂಜುನಾಥ, ವಿರುಪಾಕ್ಷಪ್ಪ ಹೇರೂರ, ನಾಗರಾಜ ವಗರನಾಳ, ಲಿಂಗಾರೆಡ್ಡಿ ಆಲೂರ, ವಿ.ಜಿ.ಹಿರೇಮಠ, ವೆಂಕಟಗಿರಿ ಕಸಾಪ ಹೋಬಳಿ ಅಧ್ಯಕ್ಷ ರುದ್ರೇಶ ಎಂ. ಆರಾಳ, ಕನಕಗಿರಿ ತಾಲೂಕು ಕಸಾಪ ಅಧ್ಯಕ್ಷ ಮೆಹಬೂಬ ಹುಸೇನ್, ಕರೆಗೌಡ ಕೆರೆ, ಟಿ. ರುದ್ರೇಶ, ಜಿಲ್ಲಾ ಕಸಾಪ ಕಾರ್ಯದರ್ಶಿ ಬಸವರೆಡ್ಡಿ ಆಡೂರ ಮತ್ತಿತರರು ಅವರು ಉಪಸ್ಥಿತರಿದ್ದರು.