ಗಂಗಾವತಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ಮತದಾನ ಪ್ರಕ್ರಿಯೆ ಆರಂಭ

ಗಂಗಾವತಿ, ನ.8: ನಗರದ ಶಾಸಕರ ಸರ್ಕಾರಿ ಮಾದರಿಯ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಗಂಗಾವತಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಆಯ್ಕೆಗೆ ಮತದಾನ ಪ್ರಕ್ರಿಯೆ ಬೆಳಗ್ಗೆ 9 ರಿಂದ ಆರಂಭಗೊಂಡಿದೆ.
ಒಟ್ಟು309 ಮತದಾರರು ಇದ್ದು, ಸಂಘದಲ್ಲಿ 957 ಷೇರುದಾರರ ಇದ್ದಾರೆ. ಇದರಲ್ಲಿ 309 ಮತದಾರರು ಮಾತ್ರ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.
ಮಹಿಳಾ ಮತ ಕ್ಷೇತ್ರ ಎರಡು ಸ್ಥಾನಕ್ಕೆ ಮೂವರು, ಹಿಂದುಳಿದ ವರ್ಗ ಅ ಮತ ಕ್ಷೇತ್ರದಿ ಎರಡು ಸ್ಥಾನಕ್ಕೆ ಮೂವರು ಹಾಗೂ ಸಾಮಾನ್ಯ ಮತ ಕ್ಷೇತ್ರ 9 ಸ್ಥಾನಕ್ಕೆ 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಸಾಮಾನ್ಯ ಮತ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಕಂಡುಬರುತ್ತದೆ.
ಈಗಾಗಲೇ ಎಸ್.ಸಿ ಮತ್ತು ಎಸ್ .ಟಿ ಮತ ಕ್ಷೇತ್ರಕ್ಕೆ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆ 9 ರಿಂದ ಆರಂಭಗೊಂಡಿರುವ ಮತದಾನ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ಅದೇ ಸಂಜೆ ಒಳಗೆ ಫಲಿತಾಂಶ ಪ್ರಕಟವಾಗಲಿದೆ.
ಮತದಾನ ಕೇಂದ್ರ ಸುತ್ತಲೂ 100 ಮೀಟರ್ ನಿಷೇದ ಹೇರಲಾಗಿದ್ದು, ಮತದಾನ ಪ್ರಕ್ರಿಯೆ ಶಾಂತಿಯುತವಾಗಿದೆ ನಡೆದಿದೆ.
ಶಾಲೆಯ ಮುಖ್ಯ ದ್ವಾರದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.