ಗಂಗಾವತಿ ಕೆ.ಜೆ.ಪಿ ಚಿನ್ನದ ಅಂಗಡಿಗೆ ಬೆಂಕಿ


ಸಂಜೆವಾಣಿ ವಾರ್ತೆ
ಗಂಗಾವತಿ, ಡಿ.02: ನಗರದ ಗಣೇಶ ವೃತ್ತದ ಬಳಿ ಇರುವ ಕೆ.ಜೆ.ಪಿ ಸಿಲ್ಕ್ ಆ್ಯಂಡ್ ಸ್ಯಾರೀಸ್ ಅಂಗಡಿಗೆ ಮಧ್ಯರಾತ್ರಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟಿರುವ ಘಟನೆ ಜರುಗಿದೆ.
ಕೆ.ಜೆ.ಪಿ ಜ್ಯುವೆಲರಿ ಅಂಗಡಿಯು ಹುಬ್ಬಳ್ಳಿ ಉದ್ಯಮಿಯಾದ ಗಣೇಶ ಶೇಠ ಗೆ ಸೇರಿದ್ದ ಬಂಗಾರದ ಅಂಗಡಿ ಗಂಗಾವತಿ ಶಾಖೆಯಲ್ಲಿ ಈ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರುವ ಶಂಕೆ ಇದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂಧಿಗಳು 6 ಗಂಟೆಗಳ ಕಾಲ ಶ್ರಮಿಸಿದ್ದಾರೆ.  ಸ್ಥಳಕ್ಕೆ ಪೊಲೀಸರು ನಗರಸಭೆ ಅಧಿಕಾರಿಗಳು ಆಗಮೀಸಿ ಪರೀಶಿಲಿಸಿದರು. ಇತ್ತೀಚಿಗೆ ಬನ್ನಿಗಿಡ ಕ್ಯಾಂಪ್ ನಲ್ಲಿ ಪ್ರಸ್ಟೀಜ್ ಕಂಪನಿಯ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಉಂಟಾಗಿತ್ತು.