ಗಂಗಾವತಿಯ ಶ್ರೀ ಶಾರದಾ ದೇವಸ್ಥಾನದಲ್ಲಿ  ಶರನ್ನವರಾತ್ರಿ ಉತ್ಸವ


ಸಂಜೆವಾಣಿ ವಾರ್ತೆ
ಗಂಗಾವತಿ,ಅ,17- ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಆರನೇ ವರ್ಷದ ಶರನ್ನನವರಾತ್ರಿ ಮಹೋತ್ಸವ ಅಪಾರ ಭಕ್ತಾದಿಗಳ ಶ್ರದ್ಧೆ  ಭಕ್ತಿಯಿಂದ ಜರುಗಿತು,
ಶಾರದಾ ಭಜನಾ ಮಂಡಳಿ, ಸೌಂದರ್ಯ ಲಹರಿ ಭಗಿನಿಯರ ಸಂಘ, ಸತ್ಯದೇವ ಭಜನಾ ಮಂಡಳಿ ಸೇರಿದಂತೆ 200  ಅಧಿಕ ಮಹಿಳೆಯರಿಂದ ಭಜನೆ, ಕುಂಕುಮಾರ್ಚನೆ, ಲಲಿತ ಸಹಸ್ರ ಪಾರಾಯಣ, ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ ಮಹಿಳೆಯರ ಸಂಘದ ಸಂಘಟನಾತ್ಮಕ ಶಕ್ತಿಯಿಂದ ಶ್ರೀಮಠದ ಎಲ್ಲಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗುತ್ತಿವೆ, ದಿನಂ ಪ್ರತಿ ಸಂಜೆ 6 ಗಂಟೆಯಿಂದ 8 45 ವರೆಗೆ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು ದಿನಾಂಕ 24ರ ವರೆಗೆ ಸಾಂಗತವಾಗಿ ಜರುಗಳಿದ್ದು ಒಂದು ಕೋಟಿ ಅಧಿಕ ಕುಂಕುಮಾರ್ಚನೆ ಖಂಡಿತವಾಗಿ ನೆರವೇರಲಿದೆ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಶೇಷಗಿರಿ, ಗಡಾದ್, ಶ್ರೀಪಾದ್, ಅನಿಲ್ ಕುಮಾರ್, ಬಾಲಕೃಷ್ಣ, ಕಾಶಿನಾಥ್ ಭಟ್, ಶ್ರೀನಿವಾಸ್ ಕರ್ಮುಡಿ, ಇತರರು ಪಾಲ್ಗೊಂಡಿದ್ದರು,