ಗಂಗಾವತಿಯ ಒಎಸ್‍ಬಿ ರಸ್ತೆ ಜಲಾವೃತ: ನಗರಸಭೆ ವಿರುದ್ಧ ಆಕ್ರೋಶ

ಸಂಜೆವಾಣಿ ವಾರ್ತೆ
ಗಂಗಾವತಿ ಸೆ 24 : ವಾಣಿಜ್ಯ ನಗರಿ ಗಂಗಾವತಿಯ ಹೃದಯ ಭಾಗದಲ್ಲಿರುವ ಒಎಸ್‍ಬಿ ರಸ್ತೆ ಮಳೆ ನೀರು ನಿಂತು ಜಲಾವೃತಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಸಾರ್ವಜನಿಕರು ನಗರಸಭೆ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶ್ರೀಕಾಂತ್ ಆಟೋಮೋಬೈಲ್ಸ್ ಹತ್ತಿರದ ತಿರುವಿನಲ್ಲಿ ಸುಮಾರು ಎರಡು ನೂರು ಮೀಟರ್ ಗು ಹೆಚ್ಚು ವಿಸ್ತಾರದ ರಸ್ತೆ ಕೊಂಚ ಮಳೆ ಬಂದರೆ ಸಾಕು ಜಲಾವೃತವಾಗಿ ಹಳ್ಳ ನಿರ್ಮಾಣವಾಗುತ್ತದೆ. ಸದಾ ಸಂಚಾರ ದಟ್ಟಣೆಯಿಂದ ಕೂಡಿದ ಈ ರಸ್ತೆ ಹಾಳಾಗುತ್ತಿರುವುದು ನಾಗರೀಕರಲ್ಲಿ ಕಳವಳ ಮೂಡಿಸಿದೆ.
ಇಲ್ಲಿನ ಅಂಗಡಿ ಮಾಲೀಕರು ತಮ್ಮ ಅಂಗಡಿ ಮುಂಭಾಗದ ಪುಟ್‍ಪಾತ್ ಮೇಲೆ ಮರಮ್ ಹಾಕಿಸಿಕೊಂಡು ಅತಿಕ್ರಮಣ ಮಾಡಿಕೊಂಡಿರುವುದು ಅಲ್ಲದೆ ಇತ್ತಿಚಿನ ಅವೈಜ್ಞಾನಿಕ ಚರಂಡಿ ಕಾಮಗಾರಿ ನಿರ್ವಹಣೆ ರಸ್ತೆಯಲ್ಲಿ ನೀರು ನಿಲ್ಲುವುದಕ್ಕೆ ಪ್ರಮುಖ ಕಾರಣವಾಗಿದೆ.
ಡೆಂಗ್ಯು ಉಲ್ಬಣವಾಗುವ ಭೀತಿ: ಈಗಾಗಲೆ ಅಲ್ಲಲ್ಲಿ ಡೆಂಗ್ಯು ಪ್ರಕರಣಗಳು ತಾಲೂಕಿನಲ್ಲಿ ಕಂಡುಬರುತ್ತಿದ್ದು, ರಸ್ತೆಗಳಲ್ಲಿ ನೀರು ನಿಲ್ಲುವುದು ಅಪಾಯಕ್ಕೆ ಕಾರಣವಾಗಲಿದೆ ನಗರಸಭೆ ಅಧ್ಯಕ್ಷರು ಹಾಗು ಪೌರಾಯುಕ್ತರು ಕೂಡಲೆ ಕ್ರಮಕ್ಕೆ ಮುಂದಾಗಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ.