ಗಂಗಾವತಿಯಲ್ಲಿ ಸಾಂಸ್ಕ್ರತಿಕ ಭವನ ನಿರ್ಮಾಣಕ್ಕೆ ಚಾಲನೆ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.23: ನಗರದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಮೈದಾನ ದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ರಿ ಕಲ್ಬುರ್ಗಿ ವತಿಯಿಂದ  ಸಾಂಸ್ಕೃತಿಕ  ಭವನ ನಿರ್ಮಾಣಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೂಮಿ ಪೂಜೆ ನೆರವೇರಿಸಿದರು.
ಸಾಂಸ್ಕೃತಿಕ ಯೋಜನೆ ಅಡಿಯಲ್ಲಿ ಅಂದಾಜು ಮೊತ್ತ 25 ಲಕ್ಷ ರೂಗಳಲ್ಲಿ ಭವನ ನಿರ್ಮಿಸಲು ಚಾಲನೆ ನೀಡಲಾಯಿತು. ನಂತರ ಶಾಸಕ ಪರಣ್ಣ ಮುನವಳ್ಳಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕ್ರತಿಕ ಸಂಘವು ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಪ್ರದೇಶದ ಜಿಲ್ಲೆಗಳಲ್ಲಿ ಹತ್ತು ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಅಭಿವೃದ್ಧಿಗೊಳಿಸಲು ಮುಂದಾಗುತ್ತಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಎಂದರು.  ಕಲ್ಯಾಣ ಕರ್ನಾಟಕ ಸಂಘದ ನಿರ್ದೇಶಕರಾದ ಶಿವರಾಮಗೌಡ ಮಾತನಾಡಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕ್ರತಿಕ ಸಂಘವು ಭವನ ನಿರ್ಮಾಣಕ್ಕೆ 25 ಲಕ್ಷ ರೂ ಮಂಜೂರು ಮಾಡಿದ್ದು, ಗಂಗಾವತಿ ನಗರದಲ್ಲಿ ಸುಸರ್ಜಿತ ಸಾಂಸ್ಕ್ರತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಕೂಲವಾಗಲಿದೆ. ಇನ್ನೂ ಹಲವಾರು ಯೋಜನೆಗಳನ್ನು ಸಂಘದಿಂದ ಜಾರಿ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಕಲ್ಮಠದ ಡಾ.ಕೊಟ್ಟೂರು ಮಹಾಸ್ವಾಮಿಗಳು, ಕೊಟ್ಟೂರೇಶ್ವರ ಸಂಘದ ಕಾರ್ಯದರ್ಶಿಗಳಾದ ಶರಣೆಗೌಡ. ಕಾಲೇಜಿನ ಉಪನ್ಯಾಸಕರಾದ ಶರಣಬಸಪ್ಪ ಕೋಲ್ಕಾರ. ಸಲಹ ಸಮಿತಿಯ ಸದಸ್ಯರಾದ  ಚನ್ನಬಸಯ್ಯ ಸ್ವಾಮಿ. ಮಂಜುನಾಥ ಸ್ವಾಮಿ. ನಿರ್ಮಿತಿ ಕೇಂದ್ರದ ಅಧಿಕಾರಿಗಳಾದ ಗಂಗಾಧರ, ಎಸ್‌.ಬಿ. ಐಗೋಳ,ರಾಜಶೇಖರಪ್ಪ, ಕಲ್ಯಾಣ ಕರ್ನಾಟಕ ಸಂಘದ ಜಿಲ್ಲಾ ಸಂಯೋಜಕ  ಮಂಜುನಾಥ ಹೆಚ್. ತಾಲೂಕ ಸಂಯೋಜಕ ವಿರೇಶ ಹಣವಾಳ, ಸೇರಿದಂತೆ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು