ಗಂಗಾವತಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ: ಪ್ರಮುಖ ವೃತ್ತಗಳು ಬಿಕೋ

ಗಂಗಾವತಿ ಎ.24: ಕೋವಿಡ್ ಎರಡನೇ ಅಲೆ ಹಿನ್ನೆಲೆ ವಾರದ ( ವೀಕೆಂಡ್) ಕರ್ಪ್ಯೂ ಜಾರಿಯಾಗಿದೆ. ಈ ಹಿನ್ನಲೆ ನಗರದ ಪ್ರಮುಖ ವೃತ್ತಗಳು, ಬೀದಿ, ರಸ್ತೆಗಳು ಬಿಕೋ ಎನ್ನುತ್ತಿವೆ.
ಬೆಳಗ್ಗೆ 6ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಹೊರಗಡೆ ಬಂದಿದ್ದ ಜನರು ಇದೀಗ ಮನೆ ಸೇರಿಕೊಂಡಿದ್ದಾರೆ.
ಇನ್ನೂ ವಿವಿಧೆಡೆ ಅನಾವಶ್ಯಕವಾಗಿ ಓಡಾಡುವ ಸವಾರರ ವಾಹನ ಪೊಲೀಸರು ಎಚ್ಚರಿಕೆ ನೀಡುತ್ತಿದ್ದು, ಕೆಲಸಕ್ಕೆ ಹೋಗುವವರ ದಾಖಲೆ ಪರಿಶೀಲನೆ ಮಾಡಿ ಬಿಡುತ್ತಿರುವುದು ಕಂಡುಬಂತು.
ನಗರದ ಪ್ರಮುಖ ವೃತ್ತಗಳಾದ ಗಾಂಧೀಚೌಕ, ಚನ್ನಬವಸ ಸರ್ಕಲ್, ಜುಲೈ ನಗರ, ನೀಲಕಂಠೇಶ್ವರ ವೃತ್ತ ಸೇರಿ ನಾನಾ ಕಡೆ ಬ್ಯಾರಿಕೋಡ್ ಹಾಕಿ, ಜನರ ಓಡಾಡವರ ಮೇಲೆ ತೀವ್ರ ನಿಗಾವಹಿಸಲಾಗಿದೆ.
ಮೆಡಿಕಲ್ ಅಂಗಡಿ ಹಾಗೂ ಕೃಷಿ ಚಟುವಟಿಕೆಗಳು ಎಂದಿನಂತೆ ನಡೆದಿವೆ. ಅಲ್ಲದೇ ಬಸ್ ಸಂಚಾರ ಇದ್ದರೂ ಸಹ ಪ್ರಯಾಣಿಕರು ನಿಲ್ದಾಣದತ್ತ ಸುಳಿಯದ ಕಾರಣ ಬೀಕೊ ಎನ್ನುತ್ತಿತ್ತು.