ಗಂಗಾವತಿಯಲ್ಲಿ ಜನಾರ್ಧನರೆಡ್ಡಿ ಗೆಲುವು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಅಕ್ರಮ ಗಣಿಗಾರಿಕೆಯ ಆರೋಪದಿಂದ ಸಿಬಿಐನಿಂದ ಬಂಧಿತರಾಗಿ, ಐದು ವರ್ಷಗಳ ಕಾಲ ಜೈಲುವಾಸ ಅನುಭವಿಸಿ, ಜಾಮೀನಿನ‌ ಮೇಲೆ ಹೊರ ಬಂದರೂ ಹುಟ್ಟೂರು ಬಳ್ಲಕಾರಿ ಜಿಲ್ಲೆಯ ಪ್ರವೇಶ ಇಲ್ಲದ ಕಾರಣ, ಬಿಜೆಪಿಯಲ್ಲಿ ಮುಂದುವರೆಯಲು ಬಯಸಿದರೂ, ದೂರ ಸರಿಸಿದ ಕಾರಣ ಸಿಟ್ಟಿನಿಂದ ಸಿಡಿದೆದ್ದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿದ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಅವರು ಕೊಪ್ಪಳ ಜಿಲ್ಲೆಯಿಂದ ಸ್ಪರ್ಧೆ ಮಾಡಿ ಗಲುವು ಸಾಧಿಸಿರುವುದೊಂದು ಹೊಸ ಇತಿಹಾಸ ಸೃಷ್ಟಿಸಿದಂತಾಗಿದೆ.

ಸ್ನೇಹಿತ ಶ್ರೀರಾಮುಲು ಮೂಲಕ ಮೊದಲಿನಿಂದಲೂ ಗಮನಗಾವತಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು.‌ಬಿಜೆಪಿಯಿಂದ ಟೊಕೆಟ್ ಬಯಸಿದ್ದರು. ಅಮಿತ ಷಾ ವಿರೋಧದಿಂದ ಬಿಜೆಪಿ ಸೇರಲು ಆಗದ ಕಸರಣ ಸ್ನೇಹಿತನಿಗೆ ಸಡ್ಡು ಹೊಡೆದು ಹೊಸ ಪಕ್ಷ ಕಟ್ಟಿ ಹತ್ತಾರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಲಿಸಿದರೂ ತಾವು ಒಂದು ಸ್ಥಾನದಲ್ಲಿ ಗೆದ್ದಿದ್ದಾರೆ. ಆದರೆ ಪತ್ನಿ ಲಕ್ಷ್ಮೀ ಅರುಣಾ ಅವರನ್ನು ತವರು ಬಳ್ಳಾರಿ‌ನಗರದಲ್ಲಿ ಗೆಲಿಸಬೇಕೆಂಬ ಕನಸು ಮಾತ್ರ ಈಡೇರಲಿಲ್ಲ. ಅದಕ್ಕಾಗಿ ಅವರು ಹಿತ ಶತ್ರು ದಿವಾಕರ ಬಾಬು ಅವರ ಜೊತೆ ಕೈ ಜೋಡಿಸಿದ್ದರು.