
ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.09: ಕಳೆದ ಬಾರಿಯ ಫಲಿತಾಂಶಗಿಂತ ಹೆಚ್ಚು ಅಂಕ ಪಡೆಯುವ ಮೂಲಕ ತಾಲೂಕಿನ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.
ಸೋಮವಾರ ಪ್ರಕಟವಾದ ಎಸ್ಸೆಸ್ಸೆಲ್ಸಿ ತಾಲೂಕ ಫಲಿತಾಂಶ ಶೇ. 92.15 ಆಗಿದ್ದು, ಒಟ್ಟು 4793 ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಲ್ಲಿ 4342 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನೂ ಸರ್ಕಾರಿ ಅನುದಾನಿತ ಪ್ರೌಢಶಾಲೆಯಿಂದ ಪರೀಕ್ಷೆ ಬರೆದ 699 ವಿದ್ಯಾರ್ಥಿಗಳಲ್ಲಿ 659 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅನುದಾನ ರಹಿತ ಪ್ರೌಢ ಶಾಲೆಯಲ್ಲಿ 1401 ಮಕ್ಕಳಲ್ಲಿ 1351 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗಂಗಾವತಿ, ಕಾರಟಗಿ, ಕನಕಗಿರಿ ಸೇರಿ ಒಟ್ಟು 6852 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇದರಲ್ಲಿ 6352 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಆರಾಳ್, ಮುಕ್ಕುಂಪಿ, ಆಗೋಲಿ, ಹುಲ್ಕಿಹಾಳ ಸರ್ಕಾರಿ ಪ್ರೌಢಶಾಲೆ, ಹೇಮಗುಡ್ಡದ ಮುರಾರ್ಜಿ ದೇಸಾಯಿ ವಸತಿ ಶಾಲೆ, ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ, ಗಂಗಾವತಿಯ ಅರೋನ ಮಿರಜಕರ್, ಕೆಂಧೋಳಿ ರಾಮಣ್ಣ ಆಂಗ್ಲ ಮಾಧ್ಯಮ ಮತ್ತು ಕಾರಟಗಿಯ ಸೆಂಟ್ರಲ್ ಪ್ರೌಢ ಶಾಲೆ ಶೇ. 100 ಫಲಿತಾಂಶ ಬಂದಿದೆ. ಗಂಗಾವತಿಯ ಬಾಲಕರ ಸರ್ಕಾರಿ ಪಪೂ ಕಾಲೇಜ್ (ಪ್ರೌಢಶಾಲೆ) ಶೇ. 74.30 ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಕನಕಗಿರಿಯ ಆದರ್ಶ ವಿದ್ಯಾಲಯದ ರಕ್ಷಿತಾ ಶಿವಪ್ರಕಾಶ (618), ಹಿರೇಬೆಣಕಲ್ ವಸತಿ ಶಾಲೆಯ ಅಶ್ವಿನಿ ಹನುಮಂತಪ್ಪ, ಗಂಗಾವತಿಯ ಲಿಟಲ್ ಹಾರ್ಟ್ಸ್ ಶಾಲೆಯ ಸೃಜನಾ ಮಂಜುನಾಥ, ವಂದನಾ ಭಂಡರಾಕರ್, ಶ್ರಾವಣಿ ವೆಂಕಟೇಶ, ಕಾರಟಗಿಯ ಸೆಂಟ್ರಲ್ ಹೈಸ್ಕೂಲ್ನ ಮಹಾಲಕ್ಷ್ಮೀ ರಾಂಬಾಬು, (617), ಲಿಟ್ಲ್ ಹಾರ್ಟ್ಸ್ ಶಾಲೆಯ ವೈಷ್ಣವಿ ಪ್ರವೀಣಕುಮಾರ ಕಾಟವೇ, ಕಾರಟಗಿ ಗ್ರೀನ್ ವ್ಯಾಲಿ ಶಾಲೆಯ ರೀತೇಶ ಮಲ್ಲಿಕಾರ್ಜುನ, ಕನಕಗಿರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಹನಾ ದೇವರಡ್ಡಿ (616) ಅಂಕದೊಂದಿಗೆ ತಾಲೂಕಿಗೆ ಮೊದಲಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ತಿಳಿಸಿದ್ದಾರೆ.