ಗಂಗಾಮತ ಸಮಾಜ ಬಾಂಧವರಿಂದ ಬಿಜೆಪಿಗೆ ಬೆಂಬಲ

ಸಂಜೆವಾಣಿ ವಾರ್ತೆ

ಹರಿಹರ.ಮೇ.೬ : ಗಂಗಾಮತ ಸಮುದಾಯದ ಒಳಿತು, ಅಭಿವೃದ್ಧಿಗಾಗಿ ಬಿಜೆಪಿ ಯಾವಾಗಲೂ ನಿಮ್ಮ ಜೊತೆ ನಿಂತಿದೆ. ನೀವೂ ಕೂಡ ಪ್ರತಿ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿ ನಮ್ಮನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ. ಈ ಬಾರಿ ನಮ್ಮ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಲು ಗಂಗಾಮತ ಸಮಾಜ ನಮಗೆ ಬೆಂಬಲ ನೀಡಬೇಕು ಎಂದು ಶಾಸಕ ಬಿ.ಪಿ.ಹರೀಶ್ ಮನವಿ ಮಾಡಿದರು.ತಾಲೂಕಿನ ಗುತ್ತೂರು ಗಂಗಾಮತ ಸಮುದಾಯ ಭವನದಲ್ಲಿ ನಡೆದ ಗಂಗಾಮತ ಸಮಾಜದ ಸಭೆಯಲ್ಲಿ ಮಾತನಾಡಿ, ಸಿದ್ದೇಶಣ್ಣ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಎಲ್ಲರಿಗೂ ಸುಲಭವಾಗಿ ಕೈಗೆ ಸಿಗುವ ವ್ಯಕ್ತಿ ಸಿದ್ದೇಶಣ್ಣ. ಈ ಬಾರಿ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರನ್ನು ಬಹುಮತದಿಂದ ಆರಿಸಿ ದೆಹಲಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.ಲೋಕಸಭಾ ಕ್ಷೇತ್ರದ ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ. ದೇಶಕ್ಕೆ ಮೋದಿ, ದಾವಣಗೆರೆಗೆ ಗಾಯಿತ್ರಿ ಅಕ್ಕ ಎಂದು. ಗಂಗಾಮತ ಸಮಾಜ ನಮ್ಮ ಜೊತೆಯಲ್ಲಿದ್ದರೆ ನಮಗೆ ಇನ್ನಷ್ಟು ಶಕ್ತಿ ಬರುತ್ತದೆ. ಇದುವರೆಗೂ ನೀವು ನಮಗೆ ಬೆಂಬಲ ನೀಡಿದ್ದೀರಿ. ಈಗಲೂ ನಿಮ್ಮ ಆಶೀರ್ವಾದ ನಮ್ಮ ಅಭ್ಯರ್ಥಿ ಮೇಲೆ ಇರಲಿ ಕೇಳಿಕೊಂಡರು.ಈ ವೇಳೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಗಂಗಾಮತ ಸಮಾಜ ಬಾಂದವರು ಬೆಂಬಲ  ಸೂಚಿಸಿದರು. ಎಂಎಲ್ಸಿ ರವಿಕುಮಾರ್, ಜಿ.ಎಸ್.ಅಶ್ವಿನಿ, ಶಿವಶಂಕರ್, ಮಹಾಂತೇಶ್, ಧರ್ಮೇಂದ್ರ ರಾಟಿ, ಬೇತೂರು ಬಸವರಾಜ್, ಹೆಬ್ಬಾಳ್ ಮಹೇಂದ್ರ, ಎ.ಪಿ.ಆನಂದ್, ಪೈಲ್ವಾನ್ ಬಸಣ್ಣ, ಆಲೂರು ರಾಜು, ಕಾಡಜ್ಜಿ ರಾಜು, ಚಿಲೂರು ಲೋಕೇಶ್, ಲಿಂಗರಾಜು, ರವಿ, ಮಂಜುನಾಥ್ ಮಲೆಬೆನ್ನೂರು, ಗುಡಿಹಳ್ಳಿ ನಾಗರಾಜ್, ಪ್ಯಾಟಿ ಬಸಣ್ಣ, ಹೊನ್ನಾಳಿ ಅಧ್ಯಕ್ಷ ರಮೇಶ್, ವೆಂಕಟೇಶ್, ಎಂ.ಎನ್. ಮಂಜುನಾಥ್ ಮತ್ತು ಗಂಗಾಮತ ಸಮಾಜ ಬಾಂದವರು ಇದ್ದರು.