ಗಂಗಾಮತಸ್ಥ ಸಮಾಜದ ಮುಖಂಡರ ಸಭೆ

ಬಿಜೆಪಿ ಅಭ್ಯರ್ಥಿ ಶಾಸಕ ಶಿವರಾಜ್ ಪಾಟೀಲರಿಗೆ ಬೆಂಬಲ ಘೋಷಣೆ
ರಾಯಚೂರು,ಮೇ.೦೮- ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶಾಸಕ ಶಿವರಾಜ್ ಪಾಟೀಲರಿಗೆ ಬೆಂಬಲಿಸುವ ಕುರಿತಂತೆ ಗಂಗಾಮತಸ್ಥರ ಸಮಾಜದ ಸಭೆಯಿಂದು ಜರುಗಿತು.
ಕಳೆದ ೧೦ ವರ್ಷಗಳಿಂದ ಸಮಾಜವು ಶಿವರಾಜ್ ಪಾಟೀಲರನ್ನು ಬೆಂಬಲಿಸಿದ್ದು, ನಿರೀಕ್ಷೆಯಂತೆ ತಾವು ಕೂಡ ಸಮಾಜದ ಹಿತಕಾಪಾಡಿ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿರುವುದರಿಂದ ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಗಂಗಾಮತಸ್ಥ ಸಮಾಜದ ಮುಖಂಡರುಗಳು ತಿಳಿಸಿದರು.
ಈ ವೇಳೆ ಶಾಸಕ ಶಿವರಾಜ್ ಪಾಟೀಲ್ ಮಾತನಾಡಿ ಸಮಾಜವು ಸಂಪೂರ್ಣವಾಗಿ ಮತ್ತೊಮ್ಮೆ ನನ್ನನ್ನು ಬೆಂಬಲಿಸುವ ವಿಶ್ವಾಸವಿದ್ದು ಕಳೆದ ೧೦ ವರ್ಷದ ನನ್ನ ಅವಧಿಯಲ್ಲಿ ಯಾವುದೇ ರೀತಿಯಲ್ಲಿ ಸಮಾಜಕ್ಕೆ ಕುಂದು ತರುವ ರೀತಿಯಲ್ಲಿ ನಡೆದುಕೊಳ್ಳದೆ, ಅಭಿವೃದ್ಧಿಗೆ ಶ್ರಮಿಸಿದ್ದೇನೆ, ಅಂಬಿಗರ ಚೌಡಯ್ಯ ಪ್ರತಿಮೆಗೆ ೨೫ ಲಕ್ಷ ಹಣ ಬಿಡುಗಡೆ ಸೇರಿದಂತೆ ಹಲವು ರೀತಿಯಲ್ಲಿ ಸಮಾಜವು ನೀಡಿರುವ ಪ್ರೀತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದು ಮತ್ತೊಮ್ಮ ತಾವೆಲ್ಲರೂ ನನ್ನನ್ನು ಬೆಂಬಲಿಸುತ್ತೀರಾ ಎಂಬ ಅಗಾಧ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ್ ಸೇರಿದಂತೆ ಗಂಗಾಮತಸ್ಥ ಸಮಾಜದ ನೂರಾರು ಜನರು ಉಪಸ್ಥಿತರಿದ್ದರು.