ಗಂಗಾಮತಸ್ಥರ ಸಂಘದ ಅಧ್ಯಕ್ಷರಾಗಿ ಗುಡೇಕೋಟೆ ಹುಲಿರಾಜಪ್ಪ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ. 11 :-  ಕೂಡ್ಲಿಗಿ ತಾಲೂಕಿನ  ಗಂಗಾಮತಸ್ಥರ ಸಂಘದ ನೂತನ ಅಧ್ಯಕ್ಷರಾಗಿ  ಗುಡೇಕೋಟೆಯ ಹುಲಿರಾಜಪ್ಪ ಅವರು ಮಂಗಳವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಮಾಡಲಾಯಿತು.
ಈ ಸಂದರ್ಭದಲ್ಲಿ  ಗೌರವ ಅಧ್ಯಕ್ಷರಾಗಿ ಹೊನ್ನೂರಪ್ಪ, ಉಪಾಧ್ಯಕ್ಷರಾಗಿ ಗುಡೇಕೋಟೆ ಕುಬೇರ,  ಕೂಡ್ಲಿಗಿ ಪ್ರಕಾಶ್,  ಪ್ರಧಾನ ಕಾರ್ಯದರ್ಶಿಯಾಗಿ ಗುಡೇಕೋಟೆ ಉಮೇಶ್ ಅವರನ್ನು ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಹುಲಿರಾಜಪ್ಪ ಮಾತನಾಡಿ ತಾಲೂಕಿನ ಗಂಗಾಮತಸ್ಥರು ಅಕ್ಷರಸ್ಥರಾಗಬೇಕು, ಅಸಂಘಟಿತರಾಗಿರುವ ಈ ಸಮುದಾಯಕ್ಕೆ  ಸಿಂಧೂ ನಾಗರೀಕತೆಯಿಂದಲೂ ಇತಿಹಾಸವಿದ್ದು ಮಹಾಭಾರತ ಕಾಲದಲ್ಲಿ ಈ ಸಮುದಾಯ ರಾಜರಾಗಿ ಆಳ್ವಿಕೆ ನಡೆಸಿದ ಕುರುಹುಗಳಿವೆ ಆದರೆ ಇಂದು ಈ ಸಮುದಾಯ ಅಧಿಕಾರದಿಂದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈಗ ಈ ಸಮುದಾಯ ಸಂಘಟಿತರಾಗುವ ಮೂಲಕ ತಮ್ಮ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. 
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಗಂಗಾಮತ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಾದ ಬೇಕರಿ ಸುರೇಶ್, ಗುಡೇಕೋಟೆ ಶ್ರೀನಿವಾಸ್ ಹಾಗೂ ಗಂಗಾಮತ ಸಮಾಜದ ಮುಖಂಡರಾದ ಗೋವಿಂದಪ್ಪ , ಬಾರಿಕರ ಮಂಜುನಾಥ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.