ಗಂಗಾಪುರದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ

ಕೋಲಾರ,ನ.೮- ತಾಲೂಕಿನ ವಕ್ಕಲೇರಿ ಸಮೀಪದ ಗಂಗಾಪುರದಲ್ಲಿ ಶ್ರೀ ಭುವನೇಶ್ವರಿ ಯುವಕರ ಸಂಘದಿಂದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಗ್ರಾಮದಲ್ಲಿ ನಿರಂತರವಾಗಿ ೨೧ ವರ್ಷದಿಂದ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸುತ್ತಾ ಬಂದಿದೆ.
ಕಾರ್ಯಕ್ರಮದಲ್ಲಿ ಸಮಾಜಸೇವಕ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ ಕನ್ನಡ ನಮ್ಮ ನಾಡ ಭಾಷೆ, ನಾವೆಲ್ಲರು ಅದನ್ನು ಕಾಪಾಡಿಕೊಳ್ಳಬೇಕು, ಭಾಷೆ , ಜಲ, ಗಡಿ ವಿಚಾರ ಬಂದಾಗ ನಾವೆಲ್ಲರೂ ಒಂದಾಗಬೇಕೆಂದು ತಿಳಿಸಿದರು.
ಕನ್ನಡ ಉಪನ್ಯಾಸಕರಾದ ಅನೀಫ್‌ಸಾಬ್ ಕನ್ನಡದ ಭಾಷೆಯ ಉಗಮ ಬೆಳವಣಿಗೆ, ಕನ್ನಡದ ಇತಿಹಾಸ, ಕನ್ನಡ ಸಾಹಿತ್ಯ ಚರಿತ್ರೆಯ ಕುರಿತು ವಿಸ್ತಾರವಾಗಿ ಮಾತನಾಡಿ ಕನ್ನಡ ಅನ್ನದ ಭಾಷೆಯಾಗಲಿ ಎಂದರು.
ವೇದಿಕೆ ಮೇಲೆ ಬಣಕನಹಳ್ಳಿ ನಟರಾಜ್, ಸುಧಾಕರ್, ರಾಧಿಕ ಮಂಜುನಾಥ್, ಆನಂದ್ ಕುಮಾರ್, ಶ್ರೀನಿವಾಸ್, ಮಾಕಂಡಪ್ಪ ರಾಮಾಂಜಪ್ಪ, ಎಂ ನಾಗರಾಜ್, ಮುನಿಯಪ್ಪ, ಅನಿಲ್ ಕುಮಾರ್, ಗಾಯತ್ರಿ, ಗೀತಾಲಕ್ಷ್ಮಿ, ಅನಸೂಯ, ಕಿರಣ್, ಮಹೇಶ್ ಭುವನೇಶ್ವರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಕೋಶಾಧಿಕಾರಿ, ಸದಸ್ಯರು, ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.