ಗಂಗಾನಗರದಲ್ಲಿ ಹೊಸ ಬಸ್ ಸಂಚಾರ ಸೇವೆ ಆರಂಭ

ಕಲಬುರಗಿ:ಮಾ.6: ಗಂಗಾ ನಗರದ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿರುವ ಬಸ್ ಸಂಚಾರ ಕೊನೆಗೂ ಬುಧವಾರ ಆರಂಭಗೊಂಡಿತು.
ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿ ಶುಭ ಹಾರಿಸಿದರು.
ಸೂಪರ್ ಮಾರ್ಕೆಟ್ ನಿಂದ ನ್ಯೂ ರಾಘವೇಂದ್ರ ಕಾಲೋನಿವರೆಗೆ ಹೊರಡಲಿದ್ದು, ವಾಯಾ ಲಾಲಗೇರಿ ಕ್ರಾಸ್ ಮತ್ತು ಗಂಗಾನಗರ ಮೂಲಕ ಸಂಚರಿಸಲಿದೆ. ಈ ಭಾಗದಲ್ಲಿ ಬಡವರು, ಕೂಲಿ ಕಾರ್ಮಿಕರು ಅಧಿಕವಾಗಿರುವುದರಿಂದ ಬಸ್ ಬೇಡಿಕೆ ತುಂಬಾ ಅಗತ್ಯವಾಗಿತ್ತು. ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ಮುತುವರ್ಜಿ ವಹಿಸಿ ಕೆಕೆಆರ್‍ಟಿಸಿ ಡಿಸಿ ಅವರಿಗೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಬಸ್ ಸಂಚಾರಕ್ಕೆ ಚಾಲನೆ ದೊರೆತ್ತಿದ್ದು, ತಿಪ್ಪಣ್ಣಪ್ಪ ಕಮಕನೂರ ಅವರು ಬಸ್ ಗೆ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡುತ್ತಿದ್ದಂತೆ ಜನ ಬಸ್ ನಲ್ಲಿ ಕುಳಿತು ಸಂಭ್ರಮಿಸಿರುವುದು ಕಂಡು ಬಂತು.
ಈ ಬಸ್ ಬೆಳಗ್ಗೆ 8 ಗಂಟೆಗೆ ಮತ್ತು 8.30ಕ್ಕೆ ಹಾಗೂ ಮಧ್ಯಾಹ್ನ 3.40ಕ್ಕೆ ಮತ್ತು 4 ಗಂಟೆಗೆ ಸಂಚರಿಸಲಿದೆ.
ಈ ಸಂದರ್ಭದಲ್ಲಿ ಕೆಕೆಆರ್ ಟಿಸಿ ಡಿಸಿ ನಾರಾಯಣಪ್ಪ ಕುರುಬರ, ಡಿಟಿಓ ಈಶ್ವರ ಹೊಸಮನಿ, ಕಂಟ್ರೋಲರ್ ದೇವರಾಜ, ಚಾಲಕ ಸುಭಾಷ, ನಿರ್ವಾಹಕ ಪ್ರಕಾಶ, ಪ್ರಕಾಶ ಕಮಕನೂರ, ಸಂದೇಶ ಕಮಕನೂರ, ವಿಜಯಕುಮಾರ್ ಹದಗಲ, ಅಮೃತ ಡಿಗ್ಗಿ, ಸುಭಾಷ ಜಾಧವ, ಶಾಂತಪ್ಪ ಕೂಡಿ, ರಾಯಪ್ಪ ಹೊನಗುಂಟಿ, ಅಶೋಕ ಬಿದನೂರ ಸೇರಿದಂತೆ ಇತರರಿದ್ದರು.