ಗಂಗಾಧರ ನಾಯಕರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಬಿ.ಎಸ್.ವೈ. ಮುಖಂಡರಿಂದ ಒತ್ತಡ

ಸಿರವಾರ,ಏ.೧೫- ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮಾನ್ವಿ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಗಂಗಾಧರ ನಾಯಕರಿಗೆ ಟಿಕೆಟ್ ನೀಡುವಂತೆ ಮಾನ್ವಿ- ಸಿರವಾರ ಬಿಜೆಪಿ ಮುಖಂಡರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರಿಗೆ ಬೆಂಗಳೂರಿನ ಅವರ ನಿವಾಸಿದಲ್ಲಿ ಒತ್ತಾಯಿಸಿದರು.
ಮಾಜಿ ಶಾಸಕರಾದ ಗಂಗಾಧರ ನಾಯಕರು ಬಿಜೆಪಿ ಪಕ್ಷದ ಹಿರಿಯ ಮುಖಂಡರಾಗಿದ್ದಾರೆ. ಸುಮಾರು ಎರಡು ದಶಕಗಳಿಂದ ಪಕ್ಷವನ್ನು ಕ್ಷೇತ್ರದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ೨೦೦೮ ರಲ್ಲಿ ಪಕ್ಷದ ಟಿಕೇಟ್ ನೀಡಲಾಗಿತು. ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಕಳೆದ ವರ್ಷ ಏಕಾ ಏಕಿ ಹೊಸ ಮುಖವಾದ ಶರಣಯ್ಯ ಅವರಿಗೆ ಟಿಕೇಟ್ ನೀಡಲಾಗಿತೂ ಆದರೂ ೩೦ಸಾವಿರ ಮತಗಳನ್ನು ಪಡೆದಿದ್ದರು. ಗಂಗಾಧರ ನಾಯಕರು ಪಕ್ಷದ ನಿಷ್ಠಾವಂತರಾಗಿದ್ದೂ, ಮಾನ್ವಿ- ಸಿರವಾರ ತಾಲೂಕಿನ ಪ್ರತಿಯೊಂದು ಗ್ರಾಮ, ಹಳ್ಳಿ, ಪಟ್ಟಣದ ಮಾಹಿತಿ ಸಮಸ್ಯೆಗಳ ಬಗ್ಗೆ ಮಾಹಿತಿ, ಪಕ್ಷದ ಮುಖಂಡರು ಕಾರ್ಯಕರ್ತರನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ. ಸ್ಥಳಿಯರಾಗಿದ್ದಾರೆ, ಕ್ಷೇತ್ರದಿಂದ ಹೊರಗಿನ ವ್ಯಕ್ತಿಗೆ ಟಿಕೆಟ್ ನೀಡಬೇಡಿ, ಸ್ಥಳಿಯರಿಗೆ ಟಿಕೆಟ್ ನೀಡಬೇಕು. ಕ್ಷೇತ್ರದಲ್ಲಿ ಈ ಬಾರಿ ಅವರ ಪರ ಒಲವು ಇದೇ. ಬಿಜೆಪಿ ಟಿಕೆಟ್ ನೀಡಿದೆ ಆದರೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿ ಗಂಗಾಧರ ನಾಯಕರ ಬಗ್ಗೆ ಎಲ್ಲಾರಿಗೂ ಗೊತ್ತಿದೆ, ಈಗಾಗಲೇ ಸರ್ವೆಯಲ್ಲಿಯೂ ಸಹ ಅವರ ಹೆಸರು ಬಂದಿದೆಯಂತೆ. ಅವರ ಹೆಸರು ಮುಂಚೂಣಿಯಲಿದೆ. ಮೂರನೆ ಪಟ್ಡಿಯಲ್ಲಿ ಅವರ ಹೆಸರು ಘೋಷಣೆಯಾಗುತ್ತದೆ ಎಂಬ ವಿಶ್ವಾಸ ಇದೆ. ಈಗಾಗಲೇ ಪಕ್ಷದ ವರಿಷ್ಠರಿಗೆ ಇದರ ಬಗ್ಗೆ ಹೇಳಲಾಗಿದೆ ಎಂದರು.
ನಿಯೋಗದಲ್ಲಿ ಜೆ.ಶರಣಪ್ಪಗೌಡ, ಗೀರಯ್ಯ ಪಾಟೀಲ್, ಉಮೇಶ ಸಜ್ಜನ್, ಶ್ರೀಕಾಂತ ಪಾಟೀಲ್ ಗೂಳಿ, ಮ್ಯಾಕಲ್ ಅಯ್ಯಪ್ಪ, ಜೆ.ದೇವರಾಜಗೌಡ, ಉದಯಕುಮಾರ ಚಾಗಭಾವಿ, ಅರುಣಕುಮಾರ, ಶರಣಗೌಡ ಶಾಖಾಪೂರು, ಮಲ್ಲೇಶ ನಾಯಕ ಕಡದಿನ್ನಿ, ಹನುಂತ್ರಾಯ ಅತ್ತನೂರು,ವೆಂಕಟೇಶ ಕೋನಾಪೂರ ಪೇಟೆ, ಮಂಜುನಾಥ ನಾಯಕ ಸೇರಿದಂತೆ ಇನ್ನಿತರರು ಇದ್ದರು