ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.02: ಬಳ್ಳಾರಿ ತಾಲೂಕಿನ ಬೆಣಿಕಲ್ಲು ಗ್ರಾಮದ ಮೂಲೆಮನೆ ಗಂಗಾಧರ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾ. ಜಗದೀಶ್ ಕುಮಾರ್ ಸಿ.ಎನ್. ಹಾಗೂ ಸಹ ಮಾರ್ಗದರ್ಶಕಾರದ ಡಾ. ಕಿಚಡಿ ಚನ್ನಪ್ಪ ಇವರ ಮಾರ್ಗದರ್ಶನದಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ “ಬಳ್ಳಾರಿ ಜಿಲ್ಲೆಯ ಚುನಾವಣಾ ಪ್ರಚಾರದ ಸಮಗ್ರ ಅಧ್ಯಯನ(16ನೇ ಮತ್ತು 17ನೇ ಲೋಕಸಭಾ ಚುನಾವಣೆಯನ್ನು ಅನುಲಕ್ಷಿಸಿ) ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಸಿದ್ಧಪಡಿಸಿ ಸಲ್ಲಿಸಲಾದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರು ಡಾ. ಎ. ಸುಬ್ಬಣ್ಣ ರೈ. ಘೋಷಿಸಿದರು.